*ಬರಹ:ಶಶಿಕಲಾ ಶುಭಕರ ರಾವ್.
ಸುಳ್ಯ:ಸುಳ್ಯ ಅಭಿವೃದ್ಧಿ ಹೊಂದುತ್ತಿರುವ ನಗರ. ಶಿಕ್ಷಣ ಕಾಶಿಯಾಗಿ ಬೆಳೆದು ಪ್ರಪಂಚದ ಭೂಪಟದಲ್ಲಿ ಗುರುತಿಸಿದ ಸುಳ್ಯ ಇಂದು ಅಗಾಧವಾಗಿ ಬೆಳೆದು ನಿಂತಿದೆ. ಅರಂಬೂರಿನಿಂದ ಪೈಚಾರ್ ತನಕ ನಗರ ವಿಶಾಲವಾಗಿ ಹರಡಿದೆ. ಸುಳ್ಯ ತಾಲೂಕು ಕೇಂದ್ರವಾದ ನಂತರವೂ ಗಾಂಧಿನಗರದಲ್ಲಿ ಕೆಲವು ಕಟ್ಟಡಗಳು, ಬಸ್ ನಿಲ್ದಾಣ ಬಸ್ ನಿಲ್ದಾಣದ ಪಕ್ಕ, ಶ್ರೀರಾಮ ಪೇಟೆಯಲ್ಲಿ, ಮೊಗರ್ಪಣೆ, ಹಳೆಗೇಟುವರೆಗೂ ವಿರಳವಾಗಿ ಅಲ್ಲಲ್ಲಿ ಹಂಚು ಮಾಡಿನ ಕಟ್ಟಡಗಳೇ ಇದ್ದವು. ತಾಲೂಕು ಕೇಂದ್ರವಾದ
ಬಳಿಕ ಕೆ.ವಿ.ಜಿಯವರ ಮುತುವರ್ಜಿ ಹಾಗೂ ಮುಂದಾಳತ್ವದಲ್ಲಿ ಪದವಿ ಕಾಲೇಜು, ಇಂಜಿನಿಯರಿಂಗ್,ಮೆಡಿಕಲ್, ಡೆಂಟಲ್, ಆಯುರ್ವೇದ ಕಾಲೇಜುಗಳು ಪ್ರಾರಂಭವಾದವು. ಶಿಕ್ಷಣ ಕ್ಷೇತ್ರ ಬೆಳೆದಂತೆ ನಗರವೂ ಬೆಳೆಯಿತು.ಇತ್ತೀಚೆಗಂತೂ ಸುಳ್ಯ ಸಮಗ್ರ ಅಭಿವೃದ್ಧಿಯ ಕಡೆಗೆ ದಾಪುಗಾಲು ಹಾಕುತ್ತಾ ಮುಂದುವರಿಯುತಿದೆ.
ಕೊಡಗಿನಿಂದಿಳಿದು ಸುಳ್ಯಕ್ಕೆ ಬಂದ ಪಯಸ್ವಿನಿ ನದಿಯು ಸುಳ್ಯವನ್ನು ಸುಳಿ ಸುಳಿಯಾಗಿ ಸುತ್ತುವರಿದು ಹರಿದುದರಿಂದ ಸುಳ್ಯವೆಂದು ಹೆಸರು ಬಂದಿತು ಎಂದು ಹೇಳುತ್ತಾರೆ. ಪಶ್ಚಿಮ ಭಾಗದಲ್ಲಿ ಆಲೆಟ್ಟಿ, ಅಜ್ಜಾವರ ಗ್ರಾಮಗಳನ್ನು ಪಯಸ್ವಿನಿ ಹೊಳೆಯು ಸುಳ್ಯದಿಂದ ಬೇರ್ಪಡಿಸುತ್ತದೆ. ಆಗಿನ್ನೂ ಸೇತುವೆ ಸಂಪರ್ಕವಿರಲಿಲ್ಲ. ದೊಡ್ಡೇರಿ ಕಡೆಯಿಂದ ಸುಳ್ಯಕ್ಕೆ ಬರಲು ದೋಣಿಯ ಮುಖಾಂತರ ಪಯಸ್ವಿನಿ ನದಿಯನ್ನು ದಾಟಬೇಕಾಗಿತ್ತು. ದೋಣಿಯನ್ನು ತುಳು ಭಾಷೆಯಲ್ಲಿ ಓಡ ಎನ್ನುತ್ತಾರೆ. ಈ ಓಡ ಸುಳ್ಯದ ಭಾಗವನ್ನು ಸೇರುವ

ಸ್ಥಳವನ್ನು ಬಾಯಿ(ಮುಖ) ಅಂದರೆ ಓಡಬಾಯಿ ಎಂದು ಜನ ಕರೆದು ‘ಓಡಬಾಯಿ’ ಯಾಯಿತು. ಓಡದ ಬಳಿಕ ಬಿದಿರಿನ ಪಿಂಡಿಯಲ್ಲಿ ಜನ ದಾಟುತ್ತಿದ್ದರು.2006ರಲ್ಲಿ ಇನ್ಫೋಸಿಸ್ ಸಹಭಾಗಿತ್ವದಲ್ಲಿ ತೂಗುಸೇತುವೆ ನಿರ್ಮಾಣವಾಯಿತು. ಈಗ ಓಡ, ಪಿಂಡಿಗಳು ಮೂಲೆ ಗುಂಪಾದವು.ಆದರೆ ಊರಿನ ಹೆಸರು ಓಡಬಾಯಿ ಎಂದೇ ಪ್ರಸಿದ್ದಿಯಾಯಿತು. ತೂಗುಸೇತುವೆ ಬಹಳ ಉದ್ದವಿದ್ದು ರಾಜ ರಸ್ತೆಯಿಂದಲೇ ಕಾಣುತ್ತಿರುವುದರಿಂದ ಪ್ರವಾಸಿಗರ ಮನ ಸೆಳೆಯುತ್ತದೆ. ತಾಲೂಕು ಕೇಂದ್ರ, ಶೈಕ್ಷಣಿಕ ರಂಗದಲ್ಲಿ ಅಭಿವೃದ್ಧಿಯಾದರೂ ಹಳೆಗೇಟಿನಿಂದ ಮುಂದೆ ಪೇಟೆ ಬೆಳೆದಿರಲಿಲ್ಲ. ಇತ್ತೀಚೆಗೆ ಓಡಬಾಯಿಯೂ ಅಭಿವೃದ್ಧಿಯಾಗಿ ಸುಳ್ಯ ನಗರವು ಬೆಳೆಯಿತು. ದಾಮೋದರ-ತಾರಾ ದಂಪತಿಗಳ ಹಿರಿಯ ಪುತ್ರಿಯಾಗಿ ವಿರಾಜಪೇಟೆಯಲ್ಲಿ ಜನಿಸಿದ ನಾನು ಕುಂಭಕೋಡು ಅಚ್ಯುತ ಭಟ್ – ಕಸ್ತೂರಿ ದಂಪತಿಗಳ ದಂಪತಿಗಳ ಹಿರಿಯ ಪುತ್ರಿಯಾಗಿ ಕಿರಿಯ ಪುತ್ರ ಶುಭಾಕರ ರಾವ್ ರೊಂದಿಗೆ 1986 ಜನವರಿ 30 ರಂದು ವಿವಾಹವಾಗಿ ಕುಂಭಕೋಡಿಗೆ ಬಂದೆ. 1987 ಜುಲೈ 13 ರಂದು ಮಾವನವರಿಂದ ಪಾಲಿನಲ್ಲಿ ಸಿಕ್ಕಿದ ಓಡಬ್ಯಾ ಆಸ್ತಿಯ ಮನೆಗೆ ನಮ್ಮ ಪ್ರವೇಶವಾಯಿತು.
ಮಾಣಿ ಮೈಸೂರು ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಟ್ಟಿದ್ದು ರಸ್ತೆ ಇಕ್ಕೆಲಗಳಲ್ಲಿ ನಮ್ಮ ಆಸ್ತಿಯಿತ್ತು. ರಸ್ತೆಯ ಎರಡೂ ಬದಿ ವಿಶಾಲವಾಗಿತ್ತು. 2002ರಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಪೆಟ್ರೋಲ್ ಪಂಪ್ ಸ್ಥಾಪಿಸಲು ನಾವು ಜಾಗ ನೀಡಿದೆವು. ಪೆಟ್ರೋಲ್ ಪಂಪಿಗೆ ಸನಿಹದಲ್ಲೇ ವಾಣಿಜ್ಯ ಮಳಿಗೆಗಳ ಸಂಕೀರ್ಣವನ್ನು ಕಟ್ಟಿಸಿ ಬಾಡಿಗೆಗೆ ನೀಡಿದೆವು. ನಮ್ಮ ಈ ಪೆಟ್ರೋಲ್ ಪಂಪ್ ಸುಳ್ಯದಲ್ಲಿ ಮೂರನೆಯದು. ಮಾರುತಿ ಸುಝುಕಿ, ಹೂಂಡಾಯಿ ಮುಂತಾದ

ಹೆಸರಾಂತ ಕಂಪೆನಿಗಳ ಶೋರೂಂಗಳಿಗೆ ಅವಕಾಶ ನೀಡಿದ್ದೇವೆ.ಅದರ ಪಕ್ಕದಲ್ಲೇ ಸುಳ್ಯದ ಅಗ್ನಿ ಶಾಮಕ ದಳದವರ ಕಛೇರಿಯೂ ಒಡಬಾಯಿ ಯಲ್ಲಿದೆ ಸುಳ್ಯಕ್ಕೆ ಸುಸಜ್ಜಿತ, ವಿಶಾಲ, ಹವಾನಿಯಂತ್ರಿತ ಕಲ್ಯಾಣ ಮಂಟಪ ಕಟ್ಟುವ ಕನಸು ನಮ್ಮ ಯಜಮಾನರದು ಆಗಿತ್ತು.10 ವರ್ಷಗಳ ಹಿಂದೆ ನಮ್ಮ ಅತ್ತೆ-ಮಾವನವರ ಆಶೀರ್ವಾದದಿಂದ ಅವರ ಹೆಸರಲ್ಲೇ ಸಭಾಭವನ ನಿರ್ಮಾಣವಾಯಿತು. ವಿಶಾಲ ಪಾರ್ಕಿಂಗ್, ಇತೆ ಸುಸಜ್ಜಿತ ಪಾಕಶಾಲೆ, ಭೋಜನ ಶಾಲೆಯಿದ್ದು ಸುಳ್ಯದ ಶೋಭೆಗೆ ಮುಕುಟವಿಟ್ಟಂತೆ ಶೋಭಾಯಮಾನವಾಗಿದೆ.
ನಾವು ನಿರ್ಮಿಸಿದ ವಿನೂನಗರ ಬಡಾವಣೆ ಸುಳ್ಯದಲ್ಲಿ ಪ್ರಪ್ರಥಮ ಲೇ ಔಟ್ ಆಗಿರುತ್ತದೆ. ಸುಳ್ಯ ನಗರೀಕರಣದ ಪರ್ವ ಕಾಲದಲ್ಲಿ ಸುಮಾರು 250ಕ್ಕೂ ಹೆಚ್ಚು ಜನರಿಗೆ ನಮ್ಮ ಕಟ್ಟಡಗಳಲ್ಲಿ ಉದ್ಯೋಗ ಲಭಿಸಿದೆ. ಸುಳ್ಯ ನಗರದ ಹೆಬ್ಬಾಗಿಲು ಓಡಬಾಯಿ ಎಂದು ಜನರಾಡಿಕೊಳ್ಳುತ್ತಾರೆ. ಸುಳ್ಯದ ಅಭಿವೃದ್ಧಿಯಲ್ಲಿ ನಮಗೂ ಒಂದು ಅವಕಾಶ ದೊರೆತುದಕ್ಕೆ ಅತೀವ ಸಂತೋಷವಾಗುತ್ತದೆ. ಗುರುಹಿರಿಯರ ಆಶೀರ್ವಾದೆ, ಭಗವಂತನ ಅನುಗ್ರಹ, ಜನರ ನಿಸ್ಸಹ ಪ್ರೀತ್ಯಾದರಗಳಿಂದ ಇದೆಲ್ಲ ಸಾಧ್ಯವಾಯಿತು ಎಂದು ನನ್ನ ಅನಿಸಿಕೆ.
ಓಡಬಾಯಿಯ ಮುಕುಟಮಣಿ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರ:
ಮದುವೆಯ ಕನಸನ್ನು ನನಸಾಗಿಸುವ ಸಂಭ್ರಮಕ್ಕೆ ಮೂರ್ತರೂಪ ಕೊಟ್ಟ ಸುಂದರ ಸಭಾಭವನ ಸುಳ್ಯ ಓಡಬಾಯಿಯ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರ. ಕಲಾಮಂದಿರಕ್ಕೆ ಈಗ 11 ವರುಷದ ಸಂಭ್ರಮ. ಎಲ್ಲಾ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಸುಳ್ಯಕ್ಕೆ ಮುಕುಟಮಣಿಯಾಗಿ ತೆರೆದುಕೊಂಡ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರ ನೂರಾರು ಮದುವೆ ಮತ್ತಿತರ

ಕಾರ್ಯಕ್ರಮಗಳಿಗೆ ವೇದಿಕೆಯನ್ನು ಒದಗಿಸಿತು. ದೊಡ್ಡ ದೊಡ್ಡ
ನಗರಗಳಲ್ಲಿ ಮಾತ್ರ ಇದ್ದಂತಹಾ ವಿಶಾಲವಾದ ಮತ್ತು ಅತ್ಯಾಧುನಿಕ ಮಂದಿರವನ್ನು ಸುಳ್ಯದಲ್ಲಿಯೂ ಆರಂಭಿಸುವ ಮೂಲಕ ದಶಕದ ಹಿಂದೆ ದೊಡ್ಡ ಕ್ರಾಂತಿಯೇ ಉಂಟಾಯಿತು. ಸಾವಿರಾರು ಮಂದಿ ಭಾಗವಹಿಸುವ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಬೇರೆ ಕಡೆ ಹಾಲ್ ಹುಡುಕಬೇಕಾಗಿತ್ತು. ಆದರೆ ಕುಂಭಕೋಡು ಹಾಲ್ ಆದ ಬಳಿಕ ಸುಳ್ಯ ಹಾಗೂ ಪರಿಸರದ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಇಲ್ಲಿಯೇ ನಡೆಸಲು ಅವಕಾಶ ನೀಡಿದೆ.
ಇದೀಗ 11 ವರುಷಗಳು ಪೂರೈಸುತಿದೆ.
ವಿಶೇಷತೆಗಳು:
ಸುಳ್ಯದ ಅತ್ಯಂತ ದೊಡ್ಡದಾದ ಮತ್ತು ವ್ಯವಸ್ಥಿತ ಸಭಾಂಗಣವಾದ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರ ಹಲವು ವಿಶೇಷತೆಗಳನ್ನು ಹೊಂದಿದೆ.ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಮೀಪ ವಿಶಾಲವಾದ ಸುಸಜ್ಜಿತ ಹಾಲ್ ತಲೆ ಎತ್ತಿ ನಿಂತಿದೆ. ಶುದ್ಧ ಸಸ್ಯಾಹಾರಿ ಮಂದಿರದಲ್ಲಿ ಮದುವೆ ಮತ್ತಿತರ ಎಲ್ಲಾ ಕಾರ್ಯಕ್ರಮ ನಡೆಸುವ ವ್ಯವಸ್ಥೆ ಇದೆ.ವಿಶಾಲವಾದ ಹಾಲ್, ವೇದಿಕೆ, ಕಣ್ಮನ ಸೆಳೆಯುವ
ವಿನ್ಯಾಸ, ಜಗಮಗಿಸುವ ಲೈಟಿಂಗ್ಸ್. ವಿಶಾಲವಾದ ಭೋಜನಾಲಯ ವ್ಯವಸ್ಥೆ, ಒಂದು ಸಾವಿರ ಆಸನದ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, 150ಕ್ಕೂ ಅಧಿಕ ಕಾರುಗಳ ನಿಲುಗಡೆಗೆ ಸ್ಥಳಾವಕಾಶ, ವಸತಿ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ ವ್ಯವಸ್ಥೆ, ಯಥೇಚ್ಛ ನೀರಿನ ವ್ಯವಸ್ಥೆ. ಎಸಿ ಹಾಗೂ ನಾನ್ ಎಸಿ ವ್ಯವಸ್ಥೆ ಇಲ್ಲಿದೆ. ಬೇಕಾದವರಿಗೆ ಹವಾನಿಯಂತ್ರಿತ ವ್ಯವಸ್ಥೆ ಒದಗಿಸಲಾಗುತ್ತದೆ.ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನಡೆಸಲು ಹಾಲ್ನ ಒಂದು ಭಾಗವನ್ನು ಅತೀ ಕಡಿಮೆ ದರದಲ್ಲಿ ನೀಡಲಾಗುತ್ತದೆ.
ಕಳೆದ 11 ವರ್ಷಗಳಿಂದ ಮದುವೆ ಇನ್ನಿತರ ಕಾರ್ಯಕ್ರಮಗಳನ್ನು ನಡಸಿ ಕೈ ಜೋಡಿಸಿದ ಎಲ್ಲಾ ಹಿತೈಷಿಗಳಿಗೆ ಹಾಗೂ ಸಹಕರಿಸಿದವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಮುಂದೆಯೂ ಎಲ್ಲರ ಸಹಕಾರವನ್ನು ಬಯಸುತ್ತೇವೆ ಎಂದು ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದ ಮಾಲಕರಾದ ಶ್ರೀಮತಿ ಶಶಿಕಲಾ ಶುಭಕರ ರಾವ್ ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8618165397, 7760829870















