ಬೆಂಗಳೂರು:ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಹೊಸ ಬಸ್ಗಳನ್ನು ರಸ್ತೆಗಳಿಸಿದೆ. ಜತೆಗೆ ಪಲ್ಲಕ್ಕಿ ಉತ್ಸವ ಎಂಬ ಐಶಾರಾಮಿ ಬಸ್ಗಳ ಸೇವೆಯನ್ನು ಅಕ್ಟೋಬರ್ 7 ರಿಂದ ಆರಂಭಿಸಿದೆ.ಈ ನೂತನ ಬಸ್ಗಳಿಗೆ ಶನಿವಾರ ಬೆಂಗಳೂರಿನ ವಿಧಾನಸೌಧದ ಮುಂಭಾಗ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ
ಕೆ.ಎಚ್. ಮುನಿಯಪ್ಪ, ಈಶ್ವರ ಖಂಡ್ರೆ, ದಿನೇಶ್ ಗುಂಡೂರಾವ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.ಒಟ್ಟು 148 ಬಸ್ಗಳಿಗೆ ಚಾಲನೆ ನೀಡಲಾಗಿದ್ದು, 44 ಎಸಿ ಸ್ಲೀಪರ್ ಮತ್ತು ನಾಲ್ಕು ನಾನ್ ಎಸಿ ಸ್ಪೀಪರ್ ಬಸ್ಗಳು, 100 ನಗರ ಸಾರಿಗೆ ಬಸ್ಗಳು ಒಳಗೊಂಡಿವೆ. 40 ಪಲ್ಲಕ್ಕಿ ಉತ್ಸವ’ ಎಂಬ ಹೊಸ ಐಷಾರಾಮಿ ಬಸ್ ಸೇರ್ಪಡೆಯಾಗಿದೆ.ಈ ಹೊಸ ಐಷಾರಾಮಿ ಬಸ್ಗಳನ್ನು ಕೂಡ ಅಕ್ಟೋಬರ್ 7 ರಿಂದಲೇ ರಸ್ತೆಗಿಳಿಸುತ್ತಿದೆ.
ಪಲ್ಲಕ್ಕಿ ಬಸ್ ವಿಶೇಷತೆಗಳು 11.3 ಮೀಟರ್ ಉದ್ದದ ನಾನ್ ಎಸಿ ಬಸ್ ಬಿಎಸ್-6 ತಂತ್ರಜ್ಞಾನದ ಮಾದರಿಯ ಹೆಚ್.ಪಿ. ಇಂಜಿನ್
ಹೈಟೆಕ್ ವಿನ್ಯಾಸದ 30 ಸ್ಲೀಪರ್ ಬರ್ತ್ ಸೀಟ್ಗಳು
ಪ್ರತಿ ಸೀಟಿಗೆ ಮೊಬೈಲ್ ಹಾಗೂ ಲ್ಯಾಪ್ ಟಾಪ್ಗಳ ಚಾರ್ಜಿಂಗ್ ಹಾಗೂ ಮೊಬೈಲ್ ಸ್ಟ್ಯಾಂಡ್ ವ್ಯವಸ್ಥೆ ಸೀಟ್ ನಂಬರ್ ಮೇಲೆ ಎಲ್ಇಡಿ ಅಳವಡಿಕೆ
ಓದಲು ಉತ್ತಮ ಬೆಳಕಿನ ಎಲ್ಇಡಿ ಲೈಟ್ ಅಳವಡಿಕೆ
ಬಸ್ನಲ್ಲಿ ಅಡಿಯೋ ಸ್ವೀಕರ್ಗಳ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ ಡಿಜಿಟಲ್ ಗಡಿಯಾರ, ಹಾಗೆ ಎಲ್ಇಡಿ ಫ್ಲೋರ್
ಪ್ರತಿ ಪ್ರಯಾಣಿಕರಿಗೆ ಚಪ್ಪಲಿ ಇಡಲು ಸ್ಥಳಾವಕಾಶದ ವ್ಯವಸ್ಥೆ
ಪ್ರಯಾಣಿಕರಿಗೆ ತಲೆದಿಂಬಿನ ವ್ಯವಸ್ಥೆ ಚಾಲಕರಿಗೆ ಸಹಾಯವಾಗಲೂ ಬಸ್ ಹಿಂಭಾಗದಲ್ಲಿ ಹೈಟೆಕ್ ಕ್ಯಾಮರಾ ಅಳವಡಿಕೆ
40 ಬಸ್ಗಳ ಪೈಕಿ 30 ಬಸ್ಗಳು ರಾಜ್ಯದೊಳಗೆ ಸಂಚರಿಸಲಿವೆ ಉಳಿದ 10 ಬಸ್ಗಳು ಬೆಂಗಳೂರಿನಿಂದ ಹೊರರಾಜ್ಯಗಳಿಗೆ ಸಂಚರಿಸಲಿವೆ.