ಸುಳ್ಯ: ಸ್ನೇಹ ಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆಯವರು ಕರ್ನಾಟಕ ಸಂಸ್ಕೃತ ಭಾರತಿಯವರು ನಡೆಸುತ್ತಿರುವ “ಪ್ರವೇಶ” ಪರೀಕ್ಷೆಯಲ್ಲಿ 85 ಅಂಕಗಳನ್ನು ಗಳಿಸಿ ಡಿಸ್ಟಿಕ್ಷನ್ ಪಡೆದು ತೇರ್ಗಡೆಯಗಿದ್ದಾರೆ. ತನ್ನ 63 ನೇ ವಯಸ್ಸಿನಲ್ಲಿ ಮೂರೇ ತಿಂಗಳಲ್ಲಿ ಆನ್ ಲೈನ್ ತರಗತಿಗಳಲ್ಲಿ ಕಲಿತು ಉತ್ತೀರ್ಣರಾಗಿದ್ದಾರೆ. ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ
ಸಮಾರಂಭದಲ್ಲಿ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ನಿರ್ದೇಶಕಿ ಶ್ರೀದೇವಿ ನಾಗರಾಜ್ ಭಟ್ ಜಯಲಕ್ಷ್ಮಿ ಸಾಮ್ಲೆ ಅವರನ್ನು ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಮುಖ್ಯ ಅತಿಥಿಯಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ವಹಿಸಿದ್ದರು. ಸಂಸ್ಥೆಯ ಶಿಕ್ಷಕಿ ಸವಿತಾ ಎಂ ಅಭಿನಂದನಾ ಭಾಷಣ ಮಾಡಿದರು. ಸಂಸ್ಥೆಯ ಶಿಕ್ಷಕಿಯರಾದ ಗಿರಿಜಾ ಕುಮಾರಿ.ಎಂ ಸ್ವಾಗತಿಸಿ, ಕವಿತಾ.ಹೆಚ್.ಎ. ವಂದಿಸಿದರು. ಶಿಕ್ಷಕ ದೇವಿಪ್ರಸಾದ ಜಿ ಸಿ ಕಾಯರ್ತೋಡಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವರ್ಗದವರು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.