ಬೆಳ್ಳಾರೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗಕ್ಕೆ ಜಿಲ್ಲಾ ಪಂಚಾಯಿತಿ ಅನುದಾನದಡಿ ರೂ. 56 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೂರು ತರಗತಿ ಕೊಠಡಿಗಳು ಹಾಗೂ ಒಂದು ಶೌಚಾಲಯ ಸಂಕೀರ್ಣದ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.ಗುದ್ದಲಿಪೂಜೆಯನ್ನು
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ಎಸ್ಡಿಎಂಸಿ ಕಾರ್ಯಾಧ್ಯಕ್ಷ ಹರ್ಷ ಭಟ್ ಜೋಗಿಬೆಟ್ಟು, ಪ್ರಾರ್ಥನೆಯನ್ನು ನೆರವೇರಿಸಿದರು. ಕೆಪಿಎಸ್ ಬೆಳ್ಳಾರೆಯ ಪ್ರಾಂಶುಪಾಲರಾದ ಜನಾರ್ಧನ ಕೆ ಎನ್, ನಿಕಟಪೂರ್ವ ಎಸ್ಡಿಎಂಸಿ ಕಾರ್ಯಾಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಕಳಂಜ-ಬಾಳಿಲ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ರಾವ್, ಬೆಳ್ಳಾರೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಭಾಸ್ಕರ ನೆಟ್ಟಾರು, ಹಿರಿಯ ವಿದ್ಯಾರ್ಥಿ ದಿಲೀಪ್ ಗಟ್ಟಿಗಾರು ಉಪಸ್ಥಿತರಿದ್ದರು. ಎಸ್ಡಿಎಂಸಿ
ಲಸದಸ್ಯರಾದ ವಸಂತ ಪಡ್ಪು, ನವೀನ್ ಸಾರಕೆರೆ, ಮುರಳಿ ತಡಗಜೆ, ನಸೀಮಾ ಪಂಜಿಗಾರು, ಶಾಹೀನಾ ಮಣಿಮಜಲು, ಶಿವಾಜಿ ಮಣಿಮಜಲು, ಸೌಮ್ಯ ಐವರ್ನಾಡು ಹಾಗೂ ಜಮಾಲ್ ಮಣಿಮಜಲು, ಪೋಷಕರಾದ ಕೃಷ್ಣ ಪ್ರಸಾದ್ ಕುತ್ಯಾಡಿ, ಶಿಕ್ಷಕರಾದ ಶಾಂತಾ ಕುಮಾರಿ, ಸವಿತಾ ಗುಜರನ್, ಅರುಣಾ ಕೆ ಎಲ್, ಶೃತಿ ಬಿ, ಮತ್ತು ಮೋಹಿನಿ ಎ ಕೆ ಅವರು ಉಪಸ್ಥಿತರಿದ್ದರು. ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಿನೇಶ್ ಮಾಚಾರ್ ಸ್ವಾಗತಿಸಿ, ವಂದಿಸಿದರು.







