ಸುಳ್ಯ: ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಅವರು ಭಾಗವಹಿಸಿ ಉದ್ಘಾಟನೆ ನೆರವೇರಿಸಿದರು.
ಕೋಟೆ ಪೌಂಡೇಶನ್ ನೀಡಿದ ಬೆಂಚು ಡೆಸ್ಕ್ ಹಸ್ತಾಂತರ ಮಾಡಿದ ಶಾಸಕರು ನವೀಕೃತ ಕಂಪ್ಯೂಟರ್ ಕೊಠಡಿ ಉದ್ಘಾಟಿಸಿದರು.
ಶೇಕಡಾ ನೂರು ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ
ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಶಿಕ್ಷಕರನ್ನು ಪ್ರಂಶಸಿದರು.ಶಾಲೆಗಳ ಅಭಿವೃದ್ಧಿ ವಿಶೇಷವಾಗಿ ಅನುದಾನವನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ ರಮೇಶ್, ವಾರ್ಡ್ ಸದಸ್ಯರಾದ ಪ್ರವಿತಾ ಪ್ರಶಾಂತ್, ಕೋಟೆ ಪೌಂಡೇಶನ್ ಪ್ರತಿನಿಧಿ ಪ್ರದೀಪ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕೆ.ಬಿ.ಇಬ್ರಾಹಿಂ ಗಾಂಧಿನಗರ ಹಾಗೂ ಕೆಪಿಎಸ್ ಉಪಾಧ್ಯಕ್ಷ ಚಿದಾನಂದ ಕುದ್ಪಾಜೆ ಮತ್ತು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಪದ್ಮನಾಭ, ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲೆ ಜ್ಯೋತಿ ಲಕ್ಷ್ಮಿ. ಟಿ . ಕಾಲೇಜು ಪ್ರಾಂಶುಪಾಲರಾದ ಅಬ್ದುಲ್ ಸಮದ್ ಉಪಸ್ಥಿತರಿದ್ದರು.ಕೆಪಿಎಸ್ ಸದಸ್ಯರಾದ. ರಾಮ್ ಮುರಳಿ ಕೃಷ್ಣ,ನವೀನ ಕಾರ್ಯಾತೋಡಿ,,ವಿಜಯ ದೆಂಗೋಡಿ,ಅಝೀಜ್, ಅನಿತಾ ಕಾರ್ಯಾತೋಡಿ ಭಾಗವಹಿಸಿದ್ದರು.ಕಾಲೇಜು ಪ್ರಾಂಶುಪಾಲರಾದ ಅಬ್ದುಲ್ ಸಮದ್ ಸ್ವಾಗತಿಸಿದರು. ಪ್ರೌಢಶಾಲಾ ಹಿರಿಯ ಶಿಕ್ಷಕರಾದ ಚಿನ್ನಪ್ಪ ಗೌಡ ವಂದಿಸಿದರು. ಇಬ್ರಾಹಿಂರವರು ಕಾರ್ಯಕ್ರಮ ನಿರೂಪಿಸಿದರು.