ಬಂದಡ್ಕ: ಬಂದಡ್ಕ ಕೋಟಕ್ಕಾಲ್ ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವ ಧೂಮಾವತಿ ಹಾಗೂ ಉಪದೈವಗಳ ನೇಮೋತ್ಸವವು ಮೇ. 11ರಂದು ಮತ್ತು ಮೇ.12 ರಂದು ಬಂದಡ್ಕ ಕೋಟಕ್ಕಾಲ್ ಎಂಬಲ್ಲಿ ನಡೆಯಿತು. ಕುಂಡಂಗೋಳಿ ಕುಟುಂಬಸ್ಥರು ಆರಾಧಿಸಿಕೊಂಡು ಬರುವ
ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವ ಧೂಮಾವತಿ ಹಾಗೂ ಉಪದೈವಗಳ ನೇಮೋತ್ಸವವು ಬಹಳ ವಿಜ್ರಂಭಣೆಯಿದ ನಡೆಯಿತು. ಮೇ. 11ರಂದು ಶನಿವಾರ ಪೂರ್ವಾಹ್ನ ಉಗ್ರಾಣ ತುಂಬಿಸುವುದರ ಮೂಲಕ ಪ್ರಾರಂಭಗೊಂಡು ರಾತ್ರಿ
ದೈವಗಳು ಕೂಡಿ, ಪೊಟ್ಟ ದೈವದ ನೃತ್ಯಕೋಲವು ನಡೆಯಿತು. ಮೇ. 12ರಂದು ಪೂರ್ವಾಹ್ನ ಕೊರತ್ತಿ ದೈವದ ನೃತ್ಯಕೋಲ, ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಧರ್ಮದೈವ ಧೂಮಾವತಿ, ದೈವಗಳ ನೃತ್ಯಕೋಲ – ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಾಗೂ ಸಂಜೆ ಗುಳಿಗ ದೈವದ ಕೋಲ ನಡೆಯಿತು. ಈ ಸಂದರ್ಭದಲ್ಲಿ ಬಂದಡ್ಕ ಕೋಟಕ್ಕಾಲ್ ಹಾಗೂ ಕುಂಡಂಗೋಳಿ ತರವಾಡಿನ ಮನೆತನದವರು, ಊರ ಹಾಗೂ ಪರವೂರ ಭಕ್ತಾಧಿಗಳು ಆಗಮಿಸಿ ಶ್ರೀ ದೈವದ ಗಂಧಪ್ರಸಾದ ಸ್ವೀಕರಿಸಿದರು.