ಸುಳ್ಯ; ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ.ಬೆಳ್ಳಾರೆಯ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 53 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀತಗಣರಾಗಿ ಶೇ.100 ಫಲಿತಾಂಶ ಬಂದಿದೆ.
28 ವಿದ್ಯಾರ್ಥಿಗಳು
ಶಾರ್ವರಿ, ಧನುಷ್ರಾಮ್ ಹಾಗೂ ಊರ್ವಿಮಾನ್ಯ
ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದಾರೆ.
ಶಾರ್ವರಿ ಆರ್.ಎಸ್. ಶೇ.95.8 ಅಂಕಗಳೊಂದಿಗೆ ಸ್ಕೂಲ್ನಲ್ಲಿ ಟಾಪರ್ ಆಗಿದ್ದಾರೆ. ಧನುಷ್ ರಾಮ್ ಶೇ.94.2 ಅಂಕಗಳೊಂದಿಗೆ
ದ್ವಿತೀಯ ಹಾಗೂ ಊರ್ವಿ ಮಾನ್ಯ ಶೇ.93.60 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಉತ್ತಮ ಫಲಿತಾಂಶ ದಾಖಲಿಸಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರಾದ ಎಂ.ಪಿ.ಉಮೇಶ್ ಹಾಗೂ ಶಾಲಾ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.