ಕಲ್ಷರ್ಪೆ:ಕಲ್ಚರ್ಪೆಯಲ್ಲಿ ಮಳೆನೀರಿಗೆ ಸಿಲುಕಿ ಹರಿದು ಹೋಗಿ ಪಯಸ್ವಿನಿಗೆ ಸೇರುವ ಕಸವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ಈ ಭಾಗದಲ್ಲಿ ಪೂಮಲೆ ಭಾಗದಿಂದ ಹರಿದು ಬರುವ ನೀರಿನ ತೋಡು ಇದ್ದು ಮಳೆ ನೀರಿಗೆ ಕಸಗಳು ಕೊಚ್ಚಿಕೊಂಡು ಹೋಗಿ ಪಯಸ್ವಿನಿ ನದಿಗೆ ಸೇರುವ ಸಾಧ್ಯತೆ ಇದೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದರು. ನಗರ ಪಂಚಾಯತ್ ಸದಸ್ಯ ವಿನಯಕುಮಾರ್ ಕಂದಡ್ಕ ನೇತೃತ್ವದಲ್ಲಿ ಜೆಸಿಬಿ ತರಿಸಿ ಕಸದ ತೆರವು ಮಾಡಲಾಗಿದೆ.