ಧರ್ಮಸ್ಥಳ: ಕುಂದಾಪುರದಲ್ಲಿ ಪಂಚಗಂಗಾವಳಿ ನದಿಯಲ್ಲಿ ಕಳೆದ 14 ವರ್ಷಗಳಿಂದ ಚಿಪ್ಪುಗಳನ್ನು ಸಾಗಿಸುತ್ತಿದ್ದ “ಜೈಬಾಲಾಜಿ” ಹಾಯಿದೋಣಿಯನ್ನು ಧರ್ಮಸ್ಥಳದಲ್ಲಿ “ಮಂಜುಷಾ” ವಸ್ತು ಸಂಗ್ರಹಾಲಯಕ್ಕೆ ಅರ್ಪಿಸಲಾಯಿತು.ಕುಂದಾಪುರದ
ಜೈಬಾಲಾಜಿ ಎಂಟರ್ಪ್ರೈಸಸ್ನ ಮಾಲಕ ವೆಂಕಟೇಶ್ ಖಾರ್ವಿ ತಮ್ಮ ಹಾಯಿದೋಣಿಯನ್ನು “ಮಂಜೂಷಾ” ವಸ್ತುಸಂಗ್ರಹಾಲಯಕ್ಕೆ ಸಮರ್ಪಿಸಿದರು.
51 ಅಡಿ ಉದ್ದ ಹಾಗೂ ೧೦ ೧/೨ ಅಡಿ ಅಗಲದ ಬೃಹತ್ ಹಾಯಿದೋಣಿ ಒಂದೇ ಮರದ ಹಲಗೆಯಿಂದ ನಿರ್ಮಿತವಾಗಿದೆ. ಇದಕ್ಕೆ ೨೨ ಅಡಿ ಎತ್ತರದ ಕಾಟಿಮರ ಮತ್ತು ಹಾಯಿ ಇದೆ. ೨೦ ವರ್ಷಗಳ ಹಿಂದೆ ಇಂತಹ ಹತ್ತು ದೊಣಿಗಳಿದ್ದವು. ಚಿಪ್ಪು, ಮರ, ಹಂಚು ಸಾಗಾಟಕ್ಕೂ ಅವುಗಳು ಬಳಕೆಯಾಗುತ್ತಿದ್ದವು. ಚಿಪ್ಪು ಸದ್ಯ ನಶಿಸುತ್ತಾ ಬಂದಿರುವುದರಿAದ ಮುಂದಿನ ಪೀಳಿಗೆಗೆ ಹಾಯಿದೋಣಿ ಬಗ್ಯೆ ಪರಿಚಯ ಮಾಡಿಕೊಳ್ಳಲು ಹಾಯಿ ದೋಣಿ ಮಾರ್ಗದರ್ಶಿಯಾಗಲಿ ಎಂಬ ಉದ್ದೇಶದಿಂದ ಇದನ್ನು “ಮಂಜೂಷಾ”ಕ್ಕೆ ಸಮರ್ಪಿಸಲಾಗಿದೆ ಎಂದು ಮಾಲಕ ವೆಂಕಟೇಶ್ ಖಾರ್ವಿ ತಿಳಿಸಿದ್ದಾರೆ.