ಕಲ್ಲುಗುಂಡಿ: ಕಲ್ಲುಗುಂಡಿ ಕಡೆಪಾಲ ಬಳಿ
ವಾಹನ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಕಾರು ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ
ಬೈಕ್ ಸವಾರನನ್ನು ಸುಳ್ಯ ಆಸ್ಪತ್ರೆಗೆ ಕರೆ ತರಲಾಗಿದೆ.ಸ್ಥಳದಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಕಾರು, ಮ್ಯಾಕ್ಸ್ ಜೀಪು ಮತ್ತು ಬೈಕ್ ಅಪಘಾತಕ್ಕೆ ಈಡಾಗಿದೆ ಎಂದು ತಿಳಿದು ಬಂದಿದೆ. ಕಾರು ಮತ್ತು ಜೀಪು ಮಧ್ಯೆ ಅಪಘಾತ ಉಂಟಾಗಿದ್ದು ಬಳಿಕ ಕಾರು ಮತ್ತು ಬೈಕ್ ಮಧ್ಯೆ ಅಪಘಾತ ಉಂಟಾಗಿದೆ. ಕಾರು, ಬೈಕ್ ಹಾಗೂ ಜೀಪಿಗೆ ಹಾನಿ ಉಂಟಾಗಿದೆ.