ಸುಳ್ಯ: ಕಾಡಾನೆಗಳ ಹಿಂಡು ಸುಳ್ಯ ನಗರ ವ್ಯಾಪ್ತಿಯ ಕೇರ್ಪಳ ಭಾಗದ ಕೃಷಿಕರ ತೋಟಕ್ಕೆ ನುಗ್ಗಿ ವ್ಯಾಪಕ ಕೃಷಿ ಹಾನಿ ಮಾಡಿದೆ. ಕಾಡಿನಿಂದ ಪಯಸ್ವಿನಿ ನದಿ ದಾಟಿ ಕೇರ್ಪಳ ಭಾಗಕ್ಕೆ ನುಗ್ಗಿದ ಆನೆಗಳ ಹಿಂಡು
ರೋಶನ್ ಕುರುಂಜಿಯವರ ತೋಟದ ಬದಿಯಿಂದಾಗಿ ಬಂದು ಕೇರ್ಪಳ ತೀರ್ಥರಾಮ, ಲಿಂಗಪ್ಪ ಗೌಡ, ಕರಂಬಯ್ಯ ಅವರ ತೋಟಗಳಲ್ಲಿ ಕೃಷಿ ಹಾನಿ ಮಾಡಿದೆ. ಹಿಂಡಿನಲ್ಲಿ 9 ಆನೆಗಳು ಇತ್ತು. ಕೃಷಿ ಅಪಾರ ನಷ್ಟವಾಗಿದೆ. ಈ ವಾರದಲ್ಲಿ ಇದು ಎರಡನೇ ಬಾರಿ ಕೃಷಿ ತೋಟಕ್ಕೆ ಆನೆಗಳು ಬರುತ್ತಿರುವುದು. ಆನೆಗಳನ್ಬು ದಟ್ಟ ಕಾಡಿಗೆ ಅಟ್ಟಲು ಇಲಾಖೆ ಕೃಗೊಳ್ಳಬೇಕು ಸಾರ್ವಜನಿಕರು ಒತ್ತಾಯಿಸಿದ್ದಾರೆ.