ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದಲ್ಲಿ ಬಿಪಿಸಿಎಲ್ ಮುಂಬೈ ಫೈನಲ್ ಪ್ರವೇಶಿಸಿದೆ. ರೋಮಾಂಚಕಾರಿ ಸೆಮಿಫೈನಲ್ ಪಂದ್ಯದಲ್ಲಿ
ಸದರ್ನ್ ರೈಲ್ವೇ ತಂಡವನ್ನು 33-27 ಪಾಯಿಂಟ್ ಅಂತರದಲ್ಲಿ ಸೋಲಿಸಿದ ಬಲಿಷ್ಠ ಬಿಪಿಸಿಎಲ್ ತಂಡವು ಫೈನಲ್ ಪ್ರವೇಶಿಸಿತು. ಫ್ರೆಂಡ್ಸ್ ಕ್ಲಬ್ ಕಡಬ ಹಾಗು ಮುಂಬೈ ಪೋರ್ಟ್ ಮಧ್ಯೆ ನಡೆಯುವ ಎರಡನೇ ಸೆಮಿಫೈನಲ್ನಲ್ಲಿ ಗೆಲ್ಲುವ ತಂಡವನ್ನು ಫೈನಲ್ನಲ್ಲಿ ಬಿಪಿಸಿಎಲ್ ಎದುರಿಸಲಿದೆ.









