ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದಲ್ಲಿ ಫ್ರೆಂಡ್ಸ್ ಕ್ಲಬ್ ಕಡಬ ಫೈನಲ್ ಪ್ರವೇಶಿಸಿದೆ. ರೋಮಾಂಚಕಾರಿ ಸೆಮಿಫೈನಲ್ ಪಂದ್ಯದಲ್ಲಿ
ಮುಂಬೈ ಪೋರ್ಟ್ ತಂಡವನ್ನು ಕೇವಲ ಒಂದು ಪಾಯಿಂಟ್ ಅಂತರದಲ್ಲಿ (56-55) ಸೋಲಿಸಿ ಕಡಬ ಫೈನಲ್ ಪ್ರವೇಶಿಸಿತು. ತೀವ್ರ ಕುತೂಹಲ ಮತ್ತು ಪೈಪೋಟಿ ಕಂಡ ರೋಮಾಂಚಕಾರಿ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯ ಬಳಿಕ ಪುಟಿದೆದ್ದ ಕಡಬ ಆಕರ್ಷಕ ಆಟ ಪ್ರದರ್ಶಿಸಿ ಪಂದ್ಯ ಗೆದ್ದಿತು. ಮುಂಬೈ ಪೋರ್ಟ್ ಕೊನೆಯ ತನಕ ತೀವ್ರ ಹೋರಾಟ ನಡೆಸಿತು. ಕಡಬ ಪರ ಮಾಯಾಂಕ್ ಶೈನಿ ಮಿಂಚಿನ ಆಟ ಪ್ರದರ್ಶಿಸಿದರು.









