ಸುಳ್ಯ: ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರ ದಿಂದ ನೇಮಕಗೊಂಡ ಕೆ. ಎಂ. ಮುಸ್ತಫ ಅವರನ್ನು 38 ವರ್ಷ ಗಳ ಹಿಂದೆ ಮಂಗಳೂರು ಪಾಲಿಟೆಕ್ನಿಕ್ನಲ್ಲಿ ವ್ಯಾಸoಗ ಮಾಡುತ್ತಿರುವ ಸಂದರ್ಭದಲ್ಲಿ ಸಹಪಾಠಿಗಳಾಗಿದ್ದ ಸ್ನೇಹಿತರು ಸುಳ್ಯಕ್ಕೆ ಆಗಮಿಸಿ ಸನ್ಮಾನಿಸಿ ಗೌರವಿಸಿದರು. ಮಂಗಳೂರಿನಲ್ಲಿ
ಇಂಜಿನಿಯರ್ಗಳಾಗಿ, ಆರ್ಕಿಟೆಕ್ಟ್ಗಳಾಗಿ ಸ್ವಂತ ಉದ್ಯೋಗ ವನ್ನು ಮಾಡಿ ಕೊಂಡು ಬರುವ ಸಹಪಾಠಿಗಳು ತಮ್ಮ ಹಳೆಯ ಸಹಪಾಟಿಯನ್ನು ಗೌರವಿಸಿದರು.ಮಂಗಳೂರು ಇಂಜಿನಿಯರ್ಸ್ ಅಸೋಸಿಯೇಷನ್ ಪೂರ್ವಧ್ಯಕ್ಷ ಬಾಲಸುಬ್ರಹ್ಮಣ್ಯ,ಹೈ ಟೆಕ್ ಕನ್ಸಲಟ್ನೆಸಿ ಮಹಮ್ಮದ್ ಅಯ್ಯುಬ್ ಖಾದರ್, ಬಿಲ್ದರ್ಸ್ ಸಂಸ್ಥೆ ಕ್ರಡೈ ನಿರ್ದೇಶಕ ಶೈಲೇಶ್, ಇಂಜಿನಿಯರ್ಸ್ ಅಸೋಸಿಯೇಷನ್ ಮಾಜಿ ಕಾರ್ಯದರ್ಶಿ ಅರುಣ್ ರಾಜ್, ಇಂಜಿನಿಯರ್ ಹೇಮಂತ್ ಈ ಸಂದರ್ಭದಲ್ಲಿ ಮುಸ್ತಫ ರವರನ್ನು ಸನ್ಮಾನಿಸಿದರು.ಬಾಲಸುಬ್ರಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶದ್ದೀನ್, ಆರಂಬೂರು ಜುಮಾ ಮಸ್ಜಿದ್ ಅಧ್ಯಕ್ಷ ಬಾಷಾ ಸಾಹೇಬ್ ಎಸ್ಎಎಸ್, ಉದ್ಯಮಿ ಕೆ. ಬಿ. ಇಬ್ರಾಹಿಂ, ಕಾಂಟ್ರಾಕ್ಟರ್ ಎಂ. ಕೆ. ಅಬ್ದುಲ್ ಲತೀಫ್, ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್, ಬಶೀರ್ ಸಪ್ನಾ ಆಡ್ ಟ್ರ್ಯಾಕ್ ಮೊದಲಾದವರು ಈ ಸಂದರ್ ಉಪಸ್ಥಿತರಿದ್ದರು.