ಮೊಹಾಲಿ:ಅತೀ ಕಡಿಮೆ ಸ್ಕೋರ್ಗೆ ಕುಸಿದರೂ ಬೌಲರ್ಗಳ ಮ್ಯಾಜಿಕ್ ಬೌಲಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 16 ರನ್ಗಳ ರೋಚಕ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 15.3 ಓವರ್ಗಳಲ್ಲಿ 111 ರನ್ಗಳಿಗೆ ಆಲ್ ಔಟ್ ಆಯಿತು. ಈ ಗುರಿ ಬೆನ್ನತ್ತಿದ
ಕೋಲ್ಕತ್ತ ನೈಟ್ ರೈಡರ್ಸ್ 15.1 ಓವರ್ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 95 ರನ್ ಗಳಿಸಿ 16 ರನ್ ಸೋಲೊಪ್ಪಿಕೊಂಡಿತು.
ಪಂಜಾಬ್ನ ಬೌಲರ್ಗಳ ಕರಾರುವಕ್ಕಾದ ಬೌಲಿಂಗ್ ನೆರವಿನಿಂದ ಕೋಲ್ಕತ್ತಾ ಬ್ಯಾಟರ್ಗಳನ್ನು ಕಟ್ಟಿ ಹಾಕಿತು. ಯೂಸವೇಂದ್ರ ಚಹಲ್ 4, ಮಾರ್ಕೋ ಜಾನ್ಸನ್ 3 ವಿಕೆಟ್ ಪಡೆದು ಮಿಂಚಿದರು. 37 ರನ್ ಗಳಿಸಿದ ಅಂಗ್ರಿಕಶ್ ರಘುವಂಶಿ ಕೋಲ್ಕಾತ್ತಾದ ಟಾಪ್ ಸ್ಕೋರರ್ ಆದರು. ಇದಕ್ಕೂ ಮೊದಲು ಕೋಲ್ಕತ್ತಾದ ಬಿಗು ದಾಳಿಗೆ ಕುಸಿದ ಪಂಜಾಬ್ 111 ರನ್ಗಳಿಗೆ ಆಲ್ ಔಟ್ ಆಯಿತು. ಹರ್ಷಿತ್ ರಾಣಾ 3, ವರುಣ್ ಚಕ್ರವರ್ತಿ, ಸುನಿಲ್ ನರೈನ್ ತಲಾ 2 ವಿಕೆಟ್ ಪಡೆದರು.