ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ಇದರ ಜೇಸಿಐ ಸಪ್ತಾಹ ‘ಸುಸ್ನಿಲ’ದ ಸಮಾರೋಪ ಸಮಾರಂಭ ನಾಳೆ(ಸೆ.15) ಸಂಜೆ 6.30ಕ್ಕೆ ಅಂಬಟೆಡ್ಕದ ಆರೋಹಿ ಎನ್ನಕ್ಲೇವ್ ಸಭಾಂಗಣದಲ್ಲಿ ನಡೆಯಲಿದೆ.ಸಮಾರಂಭದಲ್ಲಿ
ಕಮಲಪತ್ರ ಪುರಸ್ಕಾರ, ಪಯಸ್ವಿನಿಶ್ರೀ ಪುರಸ್ಕಾರ, ಕಲಾಶ್ರೀ ಪುರಸ್ಕಾರ ಹಾಗೂ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರದಾನ ಮಾಡಲಾಗುವುದು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗೌರವಿಸುವ ಮೂಲಕ ಅವರ ಸೇವೆ ಮತ್ತು ಸಾಧನೆಗಳನ್ನು ಗುರುತಿಸಲಾಗುವುದು.
ಇದೇ ಸಂದರ್ಭದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಕುಟುಂಬ ಸಮ್ಮಿಲನ ಕಾರ್ಯಕ್ರಮವೂ ನಡೆಯಲಿದ್ದು, ಘಟಕದ ಸದಸ್ಯರು, ಹಿರಿಯ ಪದಾಧಿಕಾರಿಗಳು ಹಾಗೂ ಕುಟುಂಬದವರು ಭಾಗವಹಿಸಲಿದ್ದಾರೆ ಎಂದು ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ತಿಳಿಸಿದ್ದಾರೆ.











