ಗ್ಲಾಸ್ಗೊ: ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ 53 ಕೆ.ಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಜ್ಞಾನೇಶ್ವರಿ ಯಾದವ್ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.ಏಷ್ಯನ್ ಚಾಂಪಿಯನ್ಶಿಪ್ನ ಕಂಚಿನ ಪದಕ ವಿಜೇತ ವೇಟ್ಲಿಫ್ಟರ್ ಆಗಿರುವ
ಜ್ಞಾನೇಶ್ವರಿ ಯಾದವ್, ‘ಸ್ನ್ಯಾಚ್’ ವಿಭಾಗದಲ್ಲಿ 88 ಕೆ.ಜಿ ಮತ್ತು ‘ಕ್ಲೀನ್ ಅಂಡ್ ಜರ್ಕ್’ ವಿಭಾಗದಲ್ಲಿ 111 ಕೆ.ಜಿ ಸೇರಿದಂತೆ ಒಟ್ಟು 199 ಕೆ.ಜಿ ತೂಕವನ್ನು ಎತ್ತಿದರು.ನೈಜೀರಿಯಾದ ಒನೊಮೆ ಒಮೊಲೊಲ ಚಿನ್ನ ಹಾಗು ಕೆನೆಡಾದ ರೆಬೆಕಾ ಗ್ರೌಲ್ಕ್ಸ್ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಪುರುಷರ ವೇಟ್ಲಿಪ್ಟಿಂಗ್ನಲ್ಲಿ 65 ಕೆಜಿ ವಿಭಾಗದಲ್ಲಿ ಭಾರತದ ರಾಜ ಮುತ್ತುಪಾಂಡಿ ಬೆಳ್ಳಿ ಪದಕ ಪಡೆದಿದ್ದಾರೆ.ಮಹಿಳೆಯರ 48 ಕೆ.ಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಮೀರಾಬಾಯಿ ಚಾನು ಅವರು ಚಿನ್ನದ ಪದಕ ಗೆದ್ದಿದ್ದರು.








