ಅಡ್ಕಾರು:ಜಾಲ್ಸೂರು-ಅಡ್ಕಾರು ವಲಿಯುಲ್ಲಾಹಿ ದರ್ಗಾ ಶರೀಫ್ ಮಖಾಂ ಉರೂಸ್ ಸಮಾರೋಪಗೊಂಡಿತು. ಎರಡು ವರ್ಷಕ್ಕೊಮ್ಮೆ ನಡೆಯುವ ಉರೂಸ್ ಎ.12ರಿಂದ ಆರಂಭಗೊಂಡು ಎಪ್ರಿಲ್ 14 ರ ತನಕ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮದೊಂದಿಗೆ ಉರೂಸ್ ನಡೆಯಿತು.
ಉರೂಸ್ ಸಮಾರೋಪ ಸಮಾರಂಭದ ಸಾಮೂಹಿಕ ಪ್ರಾರ್ಥನೆಗೆ ಹಿರಿಯ ವಿದ್ವಾಂಸರಾದ
ಶೈಖುನಾ ಮಹ್ಮೂದುಲ್ ಫೈಝಿ ವಾಲೆಮುಂಡೋವ್ ಅವರು ನೇತೃತ್ವ ವಹಿಸಿದ್ದರು. ಖ್ಯಾತ ವಾಗ್ಮಿ ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಮುಖ್ಯ ಭಾಷಣ ಮಾಡಿದರು. ‘ಪ್ರತಿಯೋರ್ವ ಮನುಷ್ಯನು ಕೂಡ ಜೀವನವನ್ನು ಪಾವನ ಗೊಳಿಸುವ ಸತ್ಕಾರ್ಯ ಗಳನ್ನು ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸಾವಿರರಾರು ಮಂದಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ದರ್ಗಾ ಝಿಯಾರತ್ ನಡೆಸಿ ಅನ್ನ ಪ್ರಸಾದವನ್ನು ಸ್ವೀಕರಿಸಿದರು.
ಎ.12ರಂದು ಜಾಲ್ಸೂರು ಉರೂಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಹಾಜಿ ಕದಿಕಡ್ಕ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಉರೂಸ್ ಸಮಾರಂಭಕ್ಕೆ ಚಾಲನೆ ನೀಡಿದ್ದರು.ರಾತ್ರಿ ನಡೆದ ಉರೂಸ್ ಉದ್ಘಾಟನಾ ಸಮಾರಂಭದಲ್ಲಿ ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ದುಃವಾ ನೆರವೇರಿಸಿದ್ದರು. ಖ್ಯಾತ ವಾಗ್ಮಿ ಖಾರಿಹ್ ಮುಸ್ತಫಾ ಸಖಾಫಿ ತೆನ್ನಲ ಮುಖ್ಯ ಪ್ರಭಾಷಣ ಮಾಡಿದರು. ಎ.13 ರಂದು ಉರೂಸ್ ಅಂಗವಾಗಿ ದರ್ಗಾದಲ್ಲಿ ದ್ಸಿಕ್ರ್ ನೇರ್ಚೆ ನಡೆದು ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಎಣ್ಮೂರು ದುಃವಾ ನೆರವೇರಿಸಿದರು.

ಧಾರ್ಮಿಕ ಪಂಡಿತ ಹಾಗೂ ವಾಗ್ಮಿ ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಮುಖ್ಯ ಪ್ರಭಾಷಣದಲ್ಲಿ ಭಾಗವಹಿಸಿದ್ದರು.ಉರೂಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಹಾಜಿ ಕದಿಕಡ್ಕ ಅಧ್ಯಕ್ಷತೆ ವಹಿಸಿದ್ದರು.
ಜಮಾಅತ್ ಸಮಿತಿ ಅಧ್ಯಕ್ಷ ಜಿ ಪಿ ಅಬ್ದುಲ್ಲಾ ಕುಂಞಿ,ಪ್ರ. ಕಾರ್ಯದರ್ಶಿ ಸಿ ಪಿ ರಜ್ಜಾಕ್,ಎಂಜೆಎಂ ಜಾಲ್ಸೂರು ಖತೀಬರಾದ ಮುನೀರ್ ಸಅದಿ ಅಲ್ ಅರ್ಶದಿ ನೆಲ್ಲಿಕುನ್ನ್, ಸದರ್ ಮುಅಲ್ಲಿಮ್ ಜುನೈದ್ ಹಿಮಮಿಸಖಾಫಿ, ಮುಅಲ್ಲಿಂಗಳಾದ ಸಾಧಿಕ್ ಫಾಲಿಲಿ ಕುಂಬ್ರ, ರಶೀದ್ ಮದನಿ, ಮುಅದ್ದೀನ್ ಹಬೀಬ್ ಹಿಮಮಿ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಮೊದಲಾದ ಉಮಾರಾ, ಉಲಮಾ ನೇತಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸ್ಥಳೀಯ ಸದಸ್ಯರು,ಯುವಕರು ಸಹಕರಿಸಿದರು.