ನೆಟ್ಟಣ:ಪ್ರಕೃತಿಯನ್ನು ಉಳಿಸಿಕೊಂಡರೆ ಮಾತ್ರ ಮನುಷ್ಯ ಸಂಕುಲ ಈ ಭೂಮಿಯಲ್ಲಿ ಬದುಕಲು ಸಾಧ್ಯ. ಆದುದರಿಂದ ಪ್ರಕೃತಿ ಮತ್ತು ಪ್ರಕೃತಿಯಲ್ಲಿನ ಜೀವಜಾಲವನ್ನು ಪ್ರೀತಿಸಿ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ.ಆರ್.ಕೆ.ನಾಯರ್ ಅವರು ಅಭಿಪ್ರಾಯಪಟ್ಟರು.ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ(ಕೆಎನ್ಎಸ್ಎಸ್) ನೆಲ್ಯಾಡಿ ಕರಯೋಗಂನ ನೆಟ್ಟಣ ಘಟಕವು ನಿರ್ಮಿಸಿದ ನೂತನ
ಸಭಾಭವನದ ಉದ್ಘಾಟನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪರಿಸರ ಕ್ಷೇತ್ರದ ಸಾಧನೆಗಾಗಿ ಡಾ.ಆರ್.ಕೆ.ನಾಯರ್ ಅವರನ್ನು ಸನ್ಮಾನಿಸಲಾಯಿತು.
ಸಭಾಭವನವನ್ನು ಬೆಂಗಳೂರಿನ ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಮನೋಹರ ಕುರುಪ್ ಉದ್ಘಾಟಿಸಿದರು. ಕೆಎನ್ಎಸ್ಎಸ್ ಮಾಜಿ ಉಪಾಧ್ಯಕ್ಷ ವಿಜಯಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು.
ಕೆಎನ್ಎಸ್ಎಸ್ ನೆಟ್ಟಣ ಘಟಕದ ಅಧ್ಯಕ್ಷ ಸುರೇಶ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಕೆಎನ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಟಿ.ವಿ.ನಾರಾಯಣ , ನೆಲ್ಯಾಡಿ ಕರಯೋಗಂನ ಅಧ್ಯಕ್ಷ ಶಿವದಾಸನ್ ಪಿಳ್ಳೆ, ಬೆಂಗಳೂರಿನ ಎಂಎಂಇಸಿಟಿ ಕಾರ್ಯದರ್ಶಿ ಮುರಳೀಧರನ್ ನಾಯರ್, ಕೆಎನ್ಎಸ್ಎಸ್ ಮಾಜಿ ಉಪಾಧ್ಯಕ್ಷ ಪಿ.ಕೆ.ಎಸ್.ಪಿಳ್ಳೆ ಉಪಸ್ಥಿತರಿದ್ದರು.
ಸಭಾಭವನದ ನಿರ್ಮಾಣದಲ್ಲಿ ವಿಶೇಷ ಶ್ರಮ ವಹಿಸಿದ ಪ್ರಸಾದ್ ಕೆ.ಜಿ. ನೆಟ್ಟಣ ಅವರನ್ನು ಗೌರವಿಸಲಾಯಿತು. .
ಕೆಎನ್ಎಸ್ಎಸ್ ಬೋರ್ಡ್ ಮೆಂಬರ್ ರಘುನಾಥನ್ ನಾಯರ್ ನೆಟ್ಟಣ ಸ್ವಾಗತಿಸಿ, ಪ್ರಸ್ತಾವನೆಗೈದರು. ಸುಳ್ಯ ಕರಯೋಗಂ ಉಪಾಧ್ಯಕ್ಷ ದುರ್ಗಾಕುಮಾರ್ ನಾಯರ್ಕೆರೆ ಆಶಯ ಮಾತುಗಳನ್ನಾಡಿದರು. ಉದಯಕುಮಾರ್ ಪಿ.ಆರ್. ನಿರೂಪಿಸಿ, ಪ್ರಕಾಶ್ ಕೆ.ಜಿ. ನೆಟ್ಟಣ ವಂದಿಸಿದರು.