ಐವರ್ನಾಡು: ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್.ಮನ್ಮಥ ಆಯ್ಕೆಯಾಗಿದ್ದಾರೆ. ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ
ಅಧ್ಯಕ್ಷರಾಗಿ ಎಸ್.ಎನ್.ಮನ್ಮಥ ಹಾಗೂ ಉಪಾಧ್ಯಕ್ಷರಾಗಿ ಮಹೇಶ್ ಜಬಳೆ ಅವಿರೋಧವಾಗಿ ಆಯ್ಕೆಯಾದರು.ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಸ್.ಎನ್.ಮನ್ಮಥ ಮೂರನೇ ಬಾರಿ ಆಯ್ಕೆಯಾಗಿದ್ದಾರೆ.
ನಿರ್ದೇಶಕ ಸ್ಥಾನಕ್ಕೆ ಡಿ.22 ರಂದು ನಡೆದ ಚುನಾವಣೆಯಲ್ಲಿ. ಎಸ್.ಎನ್.ಮನ್ಮಥ ನೇತೃತ್ವದ ತಂಡದ ಅಭ್ಯರ್ಥಿಗಳು
12 ಸ್ಥಾನಗಳ ಪೈಕಿ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ಸರು.