ನವದೆಹಲಿ:ಬಹುನಿರೀಕ್ಷಿತ ಪಂಚರಾಜ್ಯಗಳ ಚುನಾವಣಾ ಮತ ಎಣಿಕೆ ಮುಂದುವರಿದಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ,
ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ, ಅಸ್ಸಾಂನಲ್ಲಿ ಬಿಜೆಪಿ, ಪುದುಚೇರಿಯಲ್ಲಿ ಎಡಿಎಂಕೆ, ಕೇರಳ ವಿಧಾನಸಭೆಯಲ್ಲಿ
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮುನ್ನಡೆ ಸಾಧಿಸಿದೆ. ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 150, ಟಿಎಂಸಿ 92 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಲ್ಲಿ
ಟಿವಿಕೆ 100, ಎಡಿಎಂಕೆ 71, ಆಡಳಿತಾರೂಢ ಡಿಎಂಕೆ 62 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕೇರಳದಲ್ಲಿ140 ಸ್ಥಾನಗಳಲ್ಲಿ ಯುಡಿಎಫ್ 89, ಎಲ್ಡಿಎಫ್ 47, ಎನ್ಡಿಎ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಸ್ಸಾಂನಲ್ಲಿ 126 ಸ್ಥಾನಗಳಲ್ಲಿ ಬಿಜೆಪಿ 73, ಕಾಂಗ್ರೆಸ್ 27 ಸ್ಥಾನಗಳಲ್ಲಿ ಮುನ್ನಡೆ, ಪುದುಚ್ಚೇರಿಯಲ್ಲಿ ಎಡಿಎಂಕೆ 22, ಡಿಎಂಕೆ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭವಾಗಿದೆ.












