ತಿರುವನಂತಪುರಂ:ಕೇರಳ ವಿಧಾನಸಭಾ ಚುನಾವಣೆಯಲ್ಲಿ 3 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಎನ್ಡಿಎ ದಾಖಲೆ ನಿರ್ಮಿಸಿದೆ. ನೇಮಂ, ಕಯಕ್ಕೂಟಂ, ಚಾತನ್ನೂರ್ ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಗೆಲುವು ಸಾಧಿಸಿದೆ. ನೇಮಂ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ, ಕಯಕ್ಕೂಟಂ ಕ್ಷೇತ್ರದಲ್ಲಿ ಮಾಜಿ ಕೇಂದ್ರ ಸಚಿವ ವಿ.ಮುರಳೀಧರನ್ ಹಾಗೂ
ಚಾತನ್ನೂರ್ ಕ್ಷೇತ್ರದಲ್ಲಿ ಬಿ.ಬಿ. ಗೋಪಕುಮಾರ್ ಗೆಲುವು ಸಾಧಿಸಿದ್ದಾರೆ. ಕೇರಳ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 104, ಎಲ್ಡಿಎಫ್ 33 ಮತ್ತು ಎನ್ಡಿಎ 3 ಕ್ಷೇತ್ರದಲ್ಲಿ ಗೆದ್ದಿದೆ.
ಕಯಕ್ಕೂಟಂ ಕ್ಷೇತ್ರದಿಂದ ವಿ.ಮುರಳೀಧರನ್ 428 ಮತಗಳ ಅಂತರದಲ್ಲಿ ಸಚಿವ ಕಡಂಕಂಪಳ್ಳಿ ಸುರೇಂದ್ರನ್ ಅವರ ವಿರುದ್ಧ ಗೆಲುವು ಸಾಧಿಸಿದರೆ, ನೇಮಂ ಕ್ಷೇತ್ರದಲ್ಲಿ ರಾಜೀವ್ ಚಂದ್ರಶೇಖರ್ 4978 ಮತಗಳ ಅಂತರದಲ್ಲಿ ಸಚಿವ ವಿ.ಶಿವಂಕುಟ್ಟಿ ವಿರುದ್ಧ ಗೆಲುವು ಸಾಧಿಸಿದರು. ಚಾತನ್ನೂರ್ ಕ್ಷೇತ್ರದಲ್ಲಿ ಬಿ.ಬಿ.ಗೋಪಕುಮಾರ್ 4398 ಮತಗಳ ಅಂತರದಲ್ಲಿ ಎಡರಂಗದ ಆರ್.ರಾಜೇಂದ್ರನ್ ವಿರುದ್ಧ ಜಯ ದಾಖಲಿಸಿದರು. ಕೇರಳ ವಿಧಾನಸಭೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಹಿಂದೆ ಬಿಜೆಪಿಯ ಹಿರಿಯ ಮುಖಂಡ ಒ.ರಾಜಗೋಪಾಲ್ ಗೆಲುವು ದಾಖಲಿಸಿದ್ದರು.












