ಪಂಜಿಕಲ್ಲು: ಶಬರಿಮಲೆ ಯಾತ್ರೆ ಕೈಗೊಂಡಿದ್ದ ಅಯ್ಯಪ್ಪ ಭಕ್ತರು ಪಯಸ್ಬಿನಿ ನದಿಯಲ್ಲಿ ಸ್ನಾನಕ್ಕಿಳಿದ ಸಂದರ್ಭ ಮುಳುಗಿದ ಇಬ್ಬರು ಭಕ್ತರನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿದ ಘಟನೆ ಗಡಿ ಪ್ರದೇಶವಾದ ಪಂಜಿಕಲ್ಲಿನಿಂದ ವರದಿಯಾಗಿದೆ. ಬೆಳಗಾವಿ ಭಾಗದಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದ

ಅಯ್ಯಪ್ಪ ಭಕ್ತರ ತಂಡ ಪಂಜಿಕಲ್ಲು ತೂಗುಸೇತುವೆ ಬಳಿಯಲ್ಲಿ ವಾಹನ ನಿಲ್ಲಿಸಿ ಸ್ನಾನಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ಇಬ್ಬರು ಅಯ್ಯಪ್ಫ ಭಕ್ತರು ನೀರಿನ ಸೆಳೆತಕ್ಕೆ ಸಿಲುಕಿ ಮುಳಗಿದ್ದಾರೆ. ಇತರ ಭಕ್ತರ ಬೊಬ್ಬೆ ಕೇಳಿ ಸ್ಥಳೀಯರಾದ ಚೇತನ್ ಪ್ರಸಾದ್, ಮುಬಶೀರ್, ಬುಬೈರ್ ನದಿ ನೀರಿಗೆ ಧುಮುಕಿ ಅವರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಅಯ್ಯಪ್ಪ ಭಕ್ತರನ್ನು ಸ್ಥಳೀಯರು ಸೇರಿ ಆರೈಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.