ಸುಬ್ರಹ್ಮಣ್ಯ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಸ್ರೋ ಸಂಸ್ಥೆಯ ಅಡಿಷನಲ್ ಸೆಕ್ರೆಟರಿ ಸಂಧ್ಯಾ .ವಿ. ಶರ್ಮ ಭೇಟಿ ನೀಡಿದರು.
ಇಸ್ರೋ ಸಂಸ್ಥೆಯ ಸೂರ್ಯಗ್ರಹದ ಅಧ್ಯಾಯದ ಅಂಗವಾಗಿ ಉಡಾವಣೆಗೊಳ್ಳಲಿರುವ ಆದಿತ್ಯ ಎಲ್ 1 ಯಶಸ್ವಿಯಾಗಲೆಂದು
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಧ್ಯಾ .ವಿ .ಶರ್ಮರವರು ಪ್ರಾರ್ಥನೆ ಸಲ್ಲಿಸಿದರು. ಚಂದ್ರಯಾನ 3 ಯಶಸ್ವಿಯಾದ ಹಿನ್ನೆಲೆಯಲ್ಲಿ ದೇವಸ್ಥಾನದ ವತಿಯಿಂದ ಇಸ್ರೋ ಸಂಸ್ಥೆಗೆ ಅಭಿನಂದನಾ ಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಸದಸ್ಯರುಗಳಾದ ವನಜ ವಿ. ಭಟ್, ಶೋಭಾ ಗಿರಿಧರ್, ಪ್ರಸನ್ನ ದರ್ಬೆ, ಮನೋಜ್ ಉಪಸ್ಥಿತರಿದ್ದರು ಈ ದೇವಳದ ವತಿಯಿಂದ ಸಂಧ್ಯಾ ವಿ. ಶರ್ಮರವರಿಗೆ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.