ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ದೀಪಾವಳಿ ಆಚರಣೆ ಪ್ರಯುಕ್ತ ನ.9 ಸೋಮವಾರ ರಂದು ಬಲಿಂದ್ರ ಮರ ಹಾಕಿ ಪೂಜೆ ಹಾಗೂ ಗೋಪೂಜೆ ನಡೆಯಲಿದೆ.ನ.10 ಮಂಗಳವಾರ ಬೆಳಗ್ಗೆ
9:30ಕ್ಕೆ ಮೂಲ ಸ್ಥಾನ ಗರಡಿ ಬೈಲಿನಲ್ಲಿ ಬಲೀಂದ್ರ ಮರ ಹಾಕಿ ಪೂಜೆ ಹಾಗೂ ಶ್ರೀ ಉಳ್ಳಾಕ್ಳು ದೈವ ಹಾಗೂ ಶ್ರೀ ಕಾಚು ಕುಜುಂಬ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ ಹಾಗೂ ನಂತರ ದೇಗುಲದ ಎದುರು ಇರುವ ಪರಿವಾರದೈವಗಳಿಗೂ ತಂಬಿಲ ಸೇವೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.
































