ವಾಷಿಂಗ್ಟನ್: ಇರಾನ್ನ ಮೂರು ಅಣು ಕೇಂದ್ರಗಳ ಅಮೇರಿಕ ದಾಳಿ ನಡೆಸಿದೆ.ಇರಾನ್ನ ಫೋರ್ಡೊ ನತಾನ್ಸ್ ಮತ್ತು ಎಸ್ಪಹಾನ್ ಅಣು ಕೇಂದ್ರಗಳಲ್ಲಿ ದಾಳಿ ನಡೆಸಲಾಗಿದೆ. ಎಲ್ಲ ವಿಮಾನಗಳು ಇರಾನ್ ವಾಯುಪ್ರದೇಶದಿಂದ ಸುರಕ್ಷಿತವಾಗಿ ಹೊರಗೆ ಬಂದಿವೆ. ಅಣು ಕೇಂದ್ರವಾದ ಫೋರ್ಡೊದಲ್ಲಿ ಪೂರ್ಣ ಪ್ರಮಾಣದ ಪೇಲೋಡ್ ಹೊಂದಿದ
ಬಾಂಬ್ ದಾಳಿ ನಡೆಸಲಾಯಿತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ. ಅಮೆರಿಕ ನಡೆಸಿರುವ ಕಾರ್ಯಾಚರಣೆಯ ಸಂಬಂಧ ಶ್ವೇತಭವನದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವುದಾಗಿ ತಿಳಿಸಿದ್ದಾರೆ.ಎಲ್ಲ ಯುದ್ಧ ವಿಮಾನಗಳು ಸುರಕ್ಷಿತವಾಗಿ ಹಿಂತಿರುಗುತ್ತಿವೆ. ಮಹಾನ್ ಅಮೆರಿಕದ ಯೋಧರಿಗೆ ಅಭಿನಂದನೆಗಳು. ಜಗತ್ತಿನ ಬೇರೆ ಯಾವುದೇ ಸೈನ್ಯಕ್ಕೆ ಇಂತಹ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ. ಈಗ ಶಾಂತಿಯ ಸಮಯ!’ ಎಂದು ಹೇಳಿದ್ದಾರೆ. ಇಸ್ರೇಲ್ ಮತ್ತು ಇರಾನ್ ಸಂಘರ್ಷ ಆರಂಭವಾಗಿ 10 ದಿನಗಳ ಬಳಿಕ ಅಮೇರಿಕ ಎಂಟ್ರಿ ಕೊಟ್ಟಿದ್ದು ಇರಾನ್ ಮೇಲೆ ದಾಳಿ ನಡೆಸಿದೆ.ಬಿ2 ಸ್ಟೆಲ್ತ್ ವಿಮಾನದ ಮೂಲಕ ಬಂಕರ್ ಬಸ್ಟರ್ ಬಾಂಬ್ಗಳನ್ನು ಬಳಸಿ ಅಮೇರಿಕ ದಾಳಿ ಮಾಡಿದೆ ಎಂದು ವರದಿಯಾಗಿದೆ.