ಸುಳ್ಯ:ಎಲ್ಲರಿಗೂ ಅತೀ ಅಗತ್ಯವಾದ ವಸ್ತು ಎಂದರೆ ಅದು ವಸ್ತ್ರಗಳು. ವಸ್ತ್ರಗಳಿಲ್ಲದ ಬದುಕು ಊಹಿಸಲೂ ಅಸಾಧ್ಯ. ವಾಯು, ಜಲ, ಆಹಾರದಷ್ಟೇ ಮನುಷ್ಯನ ಬದುಕಿಗೆ ಅನಿವಾರ್ಯವಾದುದು ವಸ್ತ್ರಗಳು. ವಸ್ತ್ರೋದ್ಯಮ ಇಂದು ಅಗಾಧವಾಗಿ ಬೆಳೆದಿದೆ. ಎಲ್ಲಾ ವಯೋಮಾನದವರಿಗೂ ವೈವಿಧ್ಯಮಯ ವಸ್ತ್ರಗಳ ಆಗರವೇ ಇಂದು ತೆರೆದುಕೊಂಡಿದೆ. ನಾವು ಧರಿಸುವ ವಸ್ತ್ರಗಳು ಅಂಧವಾಗಿರಬೇಕು ಎಂಬುದರ ಜೊತೆಗೆ ಶುಭ್ರವಾಗಿರಬೇಕು, ಶುಚಿತ್ವದಿಂದ

ಕೂಡಿರಬೇಕಾದುದು, ಐರನ್ ಹಾಕಿ ಫಳ ಫಳ ಹೊಳೆಯುತಿರಬೇಕು. ಇದೀಗ ನಾವು ಧರಿಸುವ ದಿನ ನಿತ್ಯದ ಬಟ್ಟೆಗಳ ವಾಶ್, ಡ್ರೈವಾಶ್, ಐರನ್ ಇನ್ನು ಬಲು ಸುಲಭ.. ನಾವು ಧರಿಸುವ ಎಲ್ಲಾ ಬಟ್ಟೆ ಬರೆಗಳನ್ನು ಅಂಧವಾಗಿ ವಾಶ್ ಮಾಡಿ ಡ್ರೈ ಮಾಡಿ ಐರನ್ ಮಾಡಿ ಕೊಡಲೆಂದೇ ಹೊಸತಾಗಿ ಆರಂಭಗೊಂಡಿದೆ ‘ರಂಗೋಲಿ ಲಾಂಡ್ರಿ ಸರ್ವೀಸಸ್’. ಸುಳ್ಯದ ಹೃದಯ ಭಾಗದಲ್ಲಿ ರಥಬೀದಿಯ ಶ್ರೀ ಚೆನ್ನಕೇಶವ ದೇವಸ್ಥಾನದ ಸಂಕೀರ್ಣದಲ್ಲಿ ನೂತನ ಲಾಂಡ್ರಿ ಸರ್ವೀಸಸ್ ಶುಭಾರಂಭಗೊಂಡಿದೆ.
ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ತೆರೆದಿರುವ ರಂಗೋಲಿ ಗ್ರಾಹಕರನ್ನು ಕೈಬೀಸಿ ಕರೆಯುತಿದೆ.

ರಂಗೋಲಿ ಟೈಲರಿಂಗ್ ಶಾಪ್ನ ಮಾಲಕರಾದ ಪ್ರಶಾಂತಿ ಬಡ್ಡಡ್ಕ ಮತ್ತು ಸ್ಪಂದನ ಜುವೆಲ್ಲರಿಯ ಮಾಲಕರಾದ ಸಂಜೀವ ಅವರ ಮಾಲಕತ್ವದಲ್ಲಿ ಹೊಸ ಸಂಸ್ಥೆ ರಂಗೋಲಿ ಲಾಂಡ್ರಿ ಸರ್ವೀಸಸ್ ಆರಂಭಗೊಂಡಿದೆ. ಇಲ್ಲಿ ಆಧುನಿಕ ಯಂತ್ರಗಳ ಸಹಾಯದಿಂದ ವಾಶಿಂಗ್, ಡ್ರೈ ವಾಶಿಂಗ್ ಹಾಗೂ ಐರನ್ ಮಾಡಿಕೊಡಲಾಗುತ್ತದೆ. ಸ್ಪರ್ಧಾತ್ಮಕ ದರದಲ್ಲಿ ಅತೀ ಶೀಘ್ರದಲ್ಲಿ ಎಲ್ಲಾ ತರಹದ ಬಟ್ಟೆಗಳ ವಾಶಿಂಗ್, ಡ್ರೈ ವಾಶಿಂಗ್ ಮತ್ತು ಐರನ್ ಮಾಡಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.


ರಂಗೋಲಿ ಟೈಲರಿಂಗ್ ಶಾಫ್:
ವಸ್ತ್ರ ವ್ಯಾಪಾರ ಮತ್ತು ಟೈಲರಿಂಗ್ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳಿಂದ ಚೆನ್ನಕೇಶವ ದೇವಸ್ಥಾನದ ವಾಣೀಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆ ರಂಗೋಲಿ. ವಸ್ತ್ರ ಮಳಿಗೆಯಾಗಿದ್ದ ರಂಗೋಲಿ ಬಳಿಕ ಎಂಬ್ರಾಯಿಡರಿ ಮೂಲಕ ಮಹಿಳೆಯರ ಡ್ರೆಸ್ ಸ್ಟಿಚ್ಚಿಂಗ್ ಸಂಸ್ಥೆಯಾಗಿ ಸುಳ್ಯದಲ್ಲಿ ಜನಪ್ರಿಯವಾಗಿದೆ. ಹೆಣ್ಣುಮಕ್ಕಳ, ಯುವತಿಯರ, ಮಹಿಳೆಯರಿಗೆ ಮನಸ್ಸಿಗೆ ಒಪ್ಪುವ ಮಿರ ಮಿರ ಮಿನುಗುವ ಆಕರ್ಷಕ

ಎಂಬ್ರಾಯಿಡರಿ ಸ್ಟಿಚ್ಚಂಗ್ ಇಲ್ಲಿ ಮಾಡಿ ಕೊಡಲಾಗುತ್ತದೆ. ಅಲ್ಲದೆ ಟಿಷರ್ಟ್ ಮತ್ತು ಬ್ಯಾಗ್ಗಳ ಮೇಲೆ ಚಿತ್ತಾಕರ್ಷಕ ಎಂಬ್ರಾಯಿಡರಿ ಚಿತ್ರಗಳನ್ನು ಹಾಕಿ ಅಂದವಾಗಿ ತಯಾರಿಸಿ ಕೊಡುತ್ತಾರೆ. ಟಿಷರ್ಟ್ ಮತ್ತು ಬ್ಯಾಗ್ಗಳ ಮೇಲೆ ಎಂಬ್ರಾಯಿಡರಿ ಸ್ಟಿಚ್ಚಿಂಗ್ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸುತ್ತಿದ್ದೇವೆ ಎನ್ನುತ್ತಾರೆ ರಂಗೋಲಿಯ ಮಾಲಕರಾದ ಪ್ರಶಾಂತಿ ಬಡ್ಡಡ್ಕ.
ಇದೀಗ ರಂಗೋಲಿ ಟೈಲರಿಂಗ್ ಸಂಸ್ಥೆಯ ಸಹ ಸಂಸ್ಥೆಯಾಗಿ ರಂಗೋಲಿ ಲಾಂಡ್ರಿ ಸರ್ವೀಸಸ್ ಕಾರ್ಯಾರಂಭ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ರಂಗೋಲಿ ಲಾಂಡ್ರಿ ಸರ್ವೀಸಸ್
ಚೆನ್ನಕೇಶವ ದೇವಸ್ಥಾನದ ವಾಣೀಜ್ಯ ಸಂಕೀರ್ಣ ಸುಳ್ಯ.
9448984236
9740546261

