ನವದೆಹಲಿ:ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ರೈತರ ಖಾತೆಗಳಿಗೆ ತಲಾ ಎರಡು ಸಾವಿರ ರೂಪಾಯಿಗಳನ್ನು ಜಮೆ ಮಾಡಲಾಗಿದೆ.ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡಿ
9.34 ಕೋಟಿಯಷ್ಟು ರೈತರಿಗಾಗಿ 18,000 ಕೋಟಿ ರೂಗೂ ಅಧಿಕ ಮೊತ್ತವನ್ನು ಬ್ಯಾಂಕ್ ಅಕೌಂಟ್ಗಳಿಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಪ್ರತೀ ಫಲಾನುಭವಿ ರೈತರ ಬ್ಯಾಂಕ್ ಅಕೌಂಟ್ಗೆ 2,000 ರೂ ಹಣ ನೇರವಾಗಿ ಜಮೆ ಆಗಲಿದೆ. ಸರ್ಕಾರ ಈ 24ನೇ ಕಂತಿನ ಹಣ ವಿತರಣೆಗೆ 18,000 ಕೋಟಿ ರೂ ವೆಚ್ಚ ಮಾಡಿದೆ.2018-19ರಲ್ಲಿ ಜಾರಿಗೆ ಬಂದ ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ಹಾಕಿರುವ ಒಟ್ಟು ಹಣವು 4.5 ಲಕ್ಷ ಕೋಟಿ ರೂಗೂ ಅಧಿಕ ಎಂದು ಅವರು ಹೇಳಿದರು.









