ಮುಂಬೈ:ಆಪರೇಶನ್ ಸಿಂದೂರ್ ವೇಳೆ ಉದ್ಭವವಾದ ಇಂಡೋ ಪಾಕ್ ಸಂಘರ್ಷದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಐಪಿಎಲ್ 2025ರ ಉಳಿದ ಪಂದ್ಯಗಳು ಮೇ 17 ರಂದು ಆರಂಭವಾಗಲಿದೆ. 17ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯ
ಜೂನ್ 3 ರಂದು ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ರದ್ದುಗೊಳಿಸಲಾಗಿದ್ದ ಪಂದ್ಯವನ್ನು ಮೇ 24 ರಂದು ಜೈಪುರದಲ್ಲಿ ಆಡಲಾಗುತ್ತದೆ.ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘೋಷಿಸಿದೆ. ಒಟ್ಟು 17 ಪಂದ್ಯಗಳು ಮೇ 17 ರಿಂದ ಜೂನ್ 3 ರವರೆಗೆ ಆರು ಬೇರೆ ಬೇರೆ ಸ್ಥಳಗಳಲ್ಲಿ ನಡೆಯಲಿವೆ.
ಮೊದಲ ಕ್ವಾಲಿಫೈಯರ್ ಪಂದ್ಯ

ಮೇ 29 ರಂದು ನಡೆಯುತ್ತದೆ. ಎಲಿಮಿನೇಟರ್ ಪಂದ್ಯ ಮರುದಿನ ನಡೆಯಲಿದೆ. ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್ನಲ್ಲಿ ಗೆದ್ದ ತಂಡ ಜೂನ್ 1 ರಂದು ಎರಡನೇ ಕ್ವಾಲಿಫೈಯರ್ನಲ್ಲಿ ಸೆಣಸಲಿವೆ. ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ತಿಳಿಸಿದ್ದಾರೆ.