ಚೆನ್ನೈ:ಸನ್ರೈಸರ್ಸ್ ಹೈದ್ರಾಬಾದ್ ತಂಡವು ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐದು ವಿಕೆಟ್ಗಳ ಜಯ ಸಾಧಿಸಿ, ಪ್ಲೇ ಆಫ್ಗೆ ಲಗ್ಗೆಯಿಟ್ಟಿತು.ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (18 ಅಂಕ) ತಂಡ ಈ ಮೊದಲೇ ಪ್ಲೇ ಆಫ್ಗೆ ಮುನ್ನಡೆದಿದೆ. ತಲಾ 16 ಅಂಕ ಗಳಿಸಿರುವ
ಗುಜರಾತ್ ಟೈಟನ್ಸ್ ಮತ್ತು ಸನ್ರೈಸರ್ಸ್ ತಂಡಗಳೂ ಮುಂದಿನ ಹಂತಕ್ಕೆ ಅರ್ಹತೆ ಪಡೆದವು. ಉಳಿದ ಒಂದು ಸ್ಥಾನಕ್ಕಾಗಿ ಐದು ತಂಡಗಳ ನಡುವೆ ಪೈಪೋಟಿಯಿದೆ. ಟಾಸ್ ಗೆದ್ದ ಋತುರಾಜ್ ಗಾಯಕವಾಡ್ ಬ್ಯಾಟಿಂಗ್ ಆಯ್ದುಕೊಂಡರು. ನಾಯಕ ಕಮಿನ್ಸ್ ಅವರ ಪರಿಣಾಮಕಾರಿ ದಾಳಿಯ ಹೊರತಾಗಿಯೂ ಆತಿಥೇಯ ತಂಡವು 7 ವಿಕೆಟ್ಗೆ 180 ರನ್ ಗಳಿಸಿತು. ಡೆವಾಲ್ಡ್ ಬ್ರೆವಿಸ್ (44, 27 ಎಸೆತ) ಮತ್ತು ಕಾರ್ತಿಕ್ ಶರ್ಮಾ (32;19ಎ) ಉಪಯುಕ್ತ ಕಾಣಿಕೆ ನೀಡಿದರು.
ಗುರಿ ಬೆನ್ನಟ್ಟಿದ ಸನ್ರೈಸರ್ಸ್ ತಂಡವು ಇಶಾನ್ (70;47ಎ, 4×7, 6×3) ಮತ್ತು ಕ್ಲಾಸೆನ್ ಅವರ ಆಟದ ಬಲದಿಂದ ಆರು ಎಸೆತಗಳು ಬಾಕಿ ಇರುವಂತೆ 5 ವಿಕೆಟ್ಗೆ 181 ರನ್ ಗಳಿಸಿ ಸಂಭ್ರಮಿಸಿತು.













