ಕೋಲ್ಕತ್ತ: ಎರಡು ತಂಡಗಳ ಆರು ಬ್ಯಾಟರ್ಗಳು ಅರ್ಧ ಶತಕ ಸಿಡಿಸಿದ ಬೃಹತ್ ಮೊತ್ತದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ಗೆ ತಂಡವು 29 ರನ್ಗಳ ಜಯ ಸಾಧಿಸಿತು.ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ಗಳಲ್ಲಿ
2 ವಿಕೆಟ್ಗಳಿಗೆ 247 ರನ್ ಗಳಿಸಿತು. ಫಿನ್ ಅಲೆನ್ 35 ಎಸೆತಗಳಲ್ಲಿ 93 ರನ್ ಗಳಿಸಿದರು. ಅವರು ಬರೋಬ್ಬರಿ 10 ಸಿಕ್ಸರ್ ಸಿಡಿಸಿದರು. ಕೇವಲ ಏಳು ರನ್ ಅಂತರದಿಂದ ಶತಕ ಕೈತಪ್ಪಿಸಿಕೊಂಡರು. ರಘುವಂಶಿ (ಔಟಾಗದೇ 82; 44ಎ) ಮತ್ತು ಗ್ರೀನ್ (ಔಟಾಗದೇ 52) ಅವರಿಬ್ಬರೂ
ಅರ್ಧಶತಕಗಳನ್ನು ಗಳಿಸಿದರು. ಗುರಿ ಬೆನ್ನಟ್ಟಿದ ಗುಜರಾತ್ 20 ಓವರ್ಗಳಲ್ಲಿ4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದರು. ನಾಯಕ ಶುಭ್ಮನ್ ಗಿಲ್ 49 ಎಸೆತಗಳಲ್ಲಿ 85, ಸಾಯ್ ಸುದರ್ಶನ್ 28 ಎಸೆತಗಳಲ್ಲಿ 53, ಜೋಸ್ ಬಟ್ಲರ್ 35 ಎಸೆತಗಳಲ್ಲಿ 57 ರನ್ ಗಳಿಸಿ ಹೋರಾಟ ನಡೆಸಿದರೂ ಜಯ ಸಾಧ್ಯವಾಗಲಿಲ್ಲ.














