ಧರ್ಮಶಾಲಾ: ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್ಗಳ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ–ಆಫ್ಗೆ ಲಗ್ಗೆಯಿಟ್ಟಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ವಿರಾಟ್ ಕೊಹ್ಲಿ (58 ರನ್), ವೆಂಕಟೇಶ್ ಐಯ್ಯರ್(ಅಜೇಯ 73 ರನ್ ),ದೇವದತ್ತ ಪಡಿಕ್ಕಲ್ (45 ರನ್) ಅವರ
ಆಟದ ನೆರವಿನಿಂದ 20 ಓವರ್ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು.223 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ 20 ಓವರ್ಗಳಲ್ಲಿ 8 ವಿಕೆಟ್ಗೆ 199 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಪಂಜಾಬ್ಗೆ ಭುವನೇಶ್ವರ್ ಕುಮಾರ್ ಆರಂಭಿಕ ಆಘಾತ ನೀಡಿದರು. ಆರಂಭಿಕ ಪ್ರಿಯಾಂಶ್ ಆರ್ಯಾ ಮೂರನೇ ಎಸೆತದಲ್ಲಿ ಡಕ್ ಔಟ್ ಆದರೆ, ಪ್ರಭಸಿಮ್ರಾನ್ ಸಿಂಗ್ 2 ರನ್ಗೆ ವಿಕೆಟ್ ಒಪ್ಪಿಸಿದರು. ನಾಯಕ

ಶ್ರೇಯಸ್ ಅಯ್ಯರ್ ಕೂಡ 1 ರನ್ಗಳಿಸಿ ಪೆವಿಲಿಯನ್ ಸೇರಿದರು.ಕೂಪರ್ ಕೊನೊಲಿ (37 ರನ್), ಸೂರ್ಯಾಂಶ್ ಶೆಡ್ಜ್ (35 ರನ್), ಮಾರ್ಕಸ್ ಸ್ಟೊಯಿನಿಸ್ (37 ರನ್) ಮತ್ತು ಶಶಾಂಕ್ ಸಿಂಗ್ (56 ರನ್) ಕೆಲಹೊತ್ತು ಪ್ರತಿರೋಧ ತೋರಿಸಿದರು. ಆದರೆ, ಗೆಲುವಿನ ಗಡಿ ದಾಟಿಸಲು ಸಾಧ್ಯವಾಗಲಿಲ್ಲ.
ಆರ್ಸಿಬಿ ಪರ ರಸಿಕ್ ಸಲಾಂ ದಾರ್ 3 ವಿಕೆಟ್, ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಆರ್ಸಿಬಿ ಪ್ಲೇ–ಆಫ್ ಪ್ರವೇಶಿಸಿದರೆ, ಸತತ 6 ಸೋಲಿನೊಂದಿಗೆ ಪಂಜಾಬ್ ತಂಡದ ನಾಕೌಟ್ ದಾರಿ ಕಷ್ಟವಾಗಿದೆ.13 ಪಂದ್ಯಗಳಿಂದ 18 ಅಂಕಗಳೊಂದಿಗೆ ಆರ್ಸಿಬಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರೆ, 13 ಪಂದ್ಯಗಳಿಂದ ಪಂಜಾಬ್ 13 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.














