ಲಖನೌ:ಲಖನೌ ಸೂಪರ್ ಜೈಂಟ್ಸ್ ತಂಡವು ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಿರಾಯಾಸವಾಗಿ ಮಣಿಸಿತು.ಲಖನೌ ತಂಡವು ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದೆ. ಈ ಸೋಲಿನಿಂದ ತಂಡದ ಪ್ಲೇ ಆಫ್ ಹಾದಿ ಕಠಿಣವಾಗಿದೆ.ಮೊದಲು ಬ್ಯಾಟ್ ಮಾಡಿದ ಚೆನ್ನೈ ಕಾರ್ತಿಕ್ ಶರ್ಮ ಅವರ
(71;42ಎ) ಅವರ ಅರ್ಧಶತಕದ ಬಲದಿಂದ 5 ವಿಕೆಟ್ಗಳಿಗೆ 187 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಲಖನೌ ತಂಡ
20 ಎಸೆತಗಳು ಬಾಕಿ ಇರುವಂತೆ ಲಖನೌ ತಂಡ 3 ವಿಕೆಟ್ಗೆ 188 ರನ್ ಗಳಿಸಿ ಸಂಭ್ರಮಿಸಿತು. ಆರಂಭಿಕಕರಾದ ಮಿಚೆಲ್ ಮಾರ್ಷ್ ಮತ್ತು ಜೋಶ್ ಇಂಗ್ಲಿಸ್ (36;32ಎ) ಅವರು ಮೊದಲ ವಿಕೆಟ್ಗೆ ಬಿರುಸಿನ 135 ರನ್ ಸೇರಿಸಿ ಗೆಲುವಿಗೆ ಮುನ್ನುಡಿ ಬರೆದರು. ಆಕ್ರಮಣಕಾರಿ ಆಟ ಪ್ರದರ್ಶಿಸಿದ ಮಾರ್ಷ್ 38 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಏಳು ಸಿಕ್ಸರ್ ನೆರವಿನಿಂದ 90 ರನ್ ಸಿಡಿಸಿದರು.ನಂತರ ಬಂದ ನಿಕೋಲಸ್ ಪೂರನ್ (ಔಟಾಗದೇ 32;17ಎ) ಮತ್ತು ಮುಕುಲ್ ಚೌಧರಿ (ಔಟಾಗದೇ 13) ತಂಡವನ್ನು ಗೆಲುವಿನ ದಡ ಸೇರಿಸಿದರು.














