ಪರಪ್ಪೆ:ಸುಳ್ಯ-ಕಾಸರಗೋಡು ಅಂತಾರಾಜ್ಯ ಸಂಪರ್ಕ ರಸ್ತೆ ಜಾಲ್ಸೂರು- ಚೆರ್ಕಳ ರಸ್ತೆಯ ಪರಪ್ಪೆಯಲ್ಲಿ ಮರ ಸಾಗಾಟದ ಲಾರಿಯೊಂದು ರಸ್ತೆ ಮಧ್ಯೆ ಹೂತು ಹೋದ ಕಾರಣ ಸುಳ್ಯ ಕಾಸರಗೋಡು ಅಂತಾರಾಜ್ಯ ರಸ್ತೆಯಲ್ಲಿ ಸಂಪರ್ಕ ರಸ್ತೆ ತಡೆ ಉಂಟಾಗಿದೆ ಎಂದು ತಿಳಿದು ಬಂದಿದೆ.ಪರಪ್ಪೆ ಸಮೀಪ
ಮೋರಿ ಕೆಲಸ ನಡೆಯುತ್ತಿದ್ದ ಪರಿಣಾಮ ಸಿಂಗಲ್ ರಸ್ತೆಯಲ್ಲಿ ವಾಹನ ಸಂಚಾರಿಸಲು ಅವಕಾಶ ಕಲ್ಪಿಸಲಾಗಿದೆ. ಈ ರಸ್ತೆಯಲ್ಲಿ ಲಾರಿ ಸಂಚಾರಿಸುತ್ತಿದ್ದಾಗ ಲಾರಿಯ ಚಕ್ರಗಳು ಹೂತು ಹೋದ ಪರಿಣಾಮ ರಸ್ತೆ ತಡೆ ಉಂಟಾಗಿದೆ.ರಸ್ತೆ ತಡೆ ಉಂಟಾದ ಹಿನ್ನಲೆಯಲ್ಲಿ ವಾಹನಗಳು ಮುರೂರು-ಮಂಡೆಕೋಲು- ಅಡೂರು ಕೊಟ್ಯಾಡಿ ರಸ್ತೆಯಲ್ಲಿ, ಕೊಟ್ಯಾಡಿ ಆಡೂರು ಮಂಡೆಕೋಲು ಅಜ್ಜಾವರ ಮಾರ್ಗದಲ್ಲಿ ವಾಹನಗಳು ಸಂಚರಿಸುತಿದೆ. ಇನ್ನು ಕೆಲವು ವಾಹನಗಳು ಈಶ್ವರಮಂಗಲ ಕಾವು ರಸ್ತೆಯ ಮೂಲಕ ಸಂಚಾರಿಸುತ್ತಿವೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ಗಂಟೆಗಳಿಂದ ಇದರಿಂದ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ ಎಂದು ತಿಳಿದು ಬಂದಿದೆ.














