ಕೊಲಂಬೊ:ಸೊಗಸಾದ ಶತಕ ಬಾರಿಸಿದ ಧ್ರುವ್ ಜುರೇಲ್ ಹಾಗು ಅರ್ಧ ಶತಕ ಬಾರಿಸಿದ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಬ್ಯಾಟಿಂಗ್ ನೆರವಿನಿಂದ ಭಾರತ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಮೇಲಗೈ ಸಾಧಿಸಿದೆ. 5 ವಿಕೆಟ್ಗೆ 300 ರನ್ಗಳೊಡನೆ ದಿನದಾಟ ಮುಂದುವರಿಸಿದ
ಭಾರತ 9 ವಿಕೆಟ್ಗೆ 503 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮಳೆ–ಮಬ್ಬಿನಿಂದ ಎಸ್ಎಸ್ಸಿ ಕ್ರೀಡಾಂಗಣದಲ್ಲಿ ಸುಮಾರು ಎರಡೂವರೆ ಗಂಟೆ ಆಟಕ್ಕೆ ಅಡ್ಡಿಯಾಯಿತು. ದಿನದಾಟದ ಕೊನೆಯಲ್ಲಿ ಶ್ರೀಲಂಕಾ 8 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಜುರೇಲ್ ಅವರ ಎರಡನೇ ಟೆಸ್ಟ್ ಶತಕ (ಔಟಾಗದೇ 115, 177 ಎಸೆತ) ಪಂತ್ ಅವರ ವೇಗದ ಅರ್ಧ ಶತಕ(63 ರನ್) ತಂಡಕ್ಕೆ ಮಹತ್ವದ್ದಾಯಿತು. ಜುರೆಲ್ ಸುತಾರ್ ಜೊತೆ 37 ರನ್, ಮೊಹಮ್ಮದ್ ಸಿರಾಜ್ ಜೊತೆ 31 ರನ್ ಜೊತೆಯಾಟವಾಡಿ ತಂಡದ ಮೊತ್ತ 500ರ ಗಡಿ ದಾಟಿತು.









