ಸುಳ್ಯ:ಸುಳ್ಯ ಇನ್ನರ್ ವೀಲ್ ಕ್ಲಬ್ ನ 2024-25 ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ಚಿಂತನಾ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಡಾ.ಸವಿತಾ ಹೊದ್ದೆಟ್ಟಿ, ಕೋಶಾಧಿಕಾರಿ ಡಾ. ಸ್ಮಿತಾ ಹರ್ಷವರ್ಧನರ ತಂಡದ ಪದಗ್ರಹಣ ಸಮಾರಂಭ ಜು.3ರಂದು ನಡೆಯಿತು.ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸವಿತಾ ನಾರ್ಕೋಡುರವರ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಂಡಿತು. ಪದಪ್ರದಾನದ ಬಳಿಕ
ನೂತನ ಅಧ್ಯಕ್ಷೆ ಚಿಂತನಾ ಸುಬ್ರಹ್ಮಣ್ಯ ರ ಅಧ್ಯಕ್ಷತೆಯಲ್ಲಿ ಸಭೆ ಮುಂದುವರಿಯಿತು.
ಸುಳ್ಯ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಶೈಮಾ ಜಿತೇಂದ್ರ ಪದಪ್ರದಾನ ನೆರವೇರಿಸಿದರು. ಪುತ್ತೂರು ಪ್ರಗತಿ ಆಸ್ಪತ್ರೆಯ ಆಯುರ್ವೇದ ತಜ್ಞರಾದ ಡಾ.ಸುಧಾ ಶ್ರೀಪತಿ ರಾವ್ ಮುಖ್ಯ ಅತಿಥಿಯಾಗಿದ್ದಾರು.
ಇನ್ನರ್ ವೀಲ್ ಕ್ಲಬ್ ನ ಬುಲೆಟಿನ್ ಇನ್ನರ್ ಸ್ಪೂರ್ತಿಯನ್ನು ಸುಳ್ಯ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷೆ ಯೋಗಿತಾ ಗೋಪಿನಾಥ್ ಬಿಡುಗಡೆಗೊಳಿಸಿದರು.ಇನ್ನರ್ ವಿಲ್ ಪದಾಧಿಕಾರಿಗಳಾದ ಪೂಜಾ ಸಂತೋಷ್, ಸೌಮ್ಯ ರವಿಪ್ರಸಾದ್, ಮೀರಾ ಮುರಳೀಧರ್ ರೈ, ಮಮತಾ ಸತೀಶ್, ನಯನಾ ಹರಿಪ್ರಸಾದ್, ಡಾ. ಹರ್ಷಿತಾ ಪುರುಷೋತ್ತಮ, ಕೃಪಾ ಚಂದ್ರಶೇಖರ ಸಹಕರಿಸಿದರು.
ಉಪಾಧ್ಯಕ್ಷೆ ಜಯಮಣಿ ವಂದಿಸಿದರು. ಡಾ. ಪ್ರಜ್ಞಾ ಮನುಜೇಶ್ ಹಾಗೂ ಆಶಿತಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.