ಮಡಿಕೇರಿ: ಕಾಸರಗೋಡುವಿನ ಉದ್ಯಮಿ, ಸಮಾಜಸೇವಕ ಅಶ್ರಫ್ ಶಾ ಮಂತೂರು ಅವರು ಸ್ತಾಪಿಸಿರುವ ದತ್ತಿನಿಧಿಗೆ ಹಿರಿಯ ಪತ್ರಕರ್ತ, ಕೊಡಗಿನ ಟಿವಿ 1 ಚಾನೆಲ್ನ ಪ್ರಧಾನ ಸಂಪಾದಕ ಅನಿಲ್ ಎಚ್.ಟಿ. ಆಯ್ಕೆಯಾಗಿದ್ದಾರೆ.ಕಾಸರಗೋಡು ಜಿಲ್ಲಾ ಕನ್ನಡ ಪತ್ರಕತ೯ರ ಕ್ಷೇಮಾಭಿವೖದ್ದಿ ಸಂಘದ ಅಧ್ಯಕ್ಷ ರವಿನಾಯ್ಕಾಪು ಈ ಕುರಿತು ಮಾಹಿತಿ ನೀಡಿದ್ದಾರೆ.ಕೊಡಗು ಜಿಲ್ಲೆಯ ಮಡಿಕೇರಿಯ
ಅನಿಲ್ ಹೆಚ್,ಟಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಈವರೆಗೆ ಕನಾ೯ಟಕದಲ್ಲಿಯೇ ದಾಖಲೆಯಾಗಿರುವ 60 ಪ್ರಶಸ್ತಿಗಳನ್ನು ಪಡೆದಿದ್ದಾರೆ,
ಪ್ರಶಸ್ತಿಯು 10 ಸಾವಿರ ರು, ನಗದು, ಪ್ರಶಸ್ತಿ ಪತ್ರವನ್ನು ಹೊಂದಿದೆ,ಜುಲೈ 13 ರಂದು ಬೆಳಗ್ಗೆ 10,30 ಗಂಟೆಗೆ ಕಾಸರಗೋಡು ಬಳಿಯ ಸೀತಂಗೋಳಿ ಗ್ರಾಮದ ಅಲಯನ್ಸ್ ಸಭಾಭನದಲ್ಲಿ ನಡೆಯುವ ಸಮಾರಂಭದಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರಧಾನ ಮತ್ತು ಕನ್ನಡ ಸಂಸ್ಕೖತಿ ಉತ್ಸವ ಆಯೋಜಿತವಾಗಿದೆ,
ಕನಾ೯ಟಕ ವಿಧಾನಸಭಾಧ್ಯಕ್ಷ ಯು,ಟಿ,ಖಾದರ್, ಅರಣ್ಯ ಸಚಿವ ಈಶ್ವರಖಂಡ್ರೆ, ಉಸಭಾಪತಿ ಎಂ,ಕೆ,ಪ್ರಾಣೇಶ್, ಎಡನೀರು ಮಠಾಧೀಶ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ,ಪಿ, ಪ್ರಭಾಕರ್, , ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಅನೇಕ ಗಣ್ಯರು ಪ್ರಶಸ್ತಿ ಪ್ರಧಾನ ಕಾಯ೯ಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ