ಮೇನಾಲ:ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡರಾಗಿದ್ದ ದಿ.ನವೀನ್ ರೈ ಮೇನಾಲ ಅವರ ನೆನಪಿನಲ್ಲಿ ಅವರ ಅಭಿಮಾನಿಗಳ ಬಳಗದ ವತಿಯಿಂದ ಮೇನಾಲದಲ್ಲಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣವನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಾರ್ಪಣೆ ಮಾಡಿದರು. ಸಜ್ಹನ ಸಮಾಜ ಸೇವಕರಾಗಿದ್ದ ನವೀನ್ ರೈ ಅವರು ಬಿಜೆಪಿ ಕಾರ್ಯಕರ್ತರಿಗೆ ಮಾದರಿಯಾಗಿದ್ದರು. ಸಾಮಾಜಿಕವಾಗಿ

ಕೆಲಸ ಮಾಡಲು ಅವರು ಪ್ರೇರಣೆ ಎಂದು ಅವರು ಬಣ್ಣಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿದರು.
ನವೀನ್ ರೈ ಅಭಿಮಾನಿ ಬಳಗದ ಸುಬೋದ್ ಶೆಟ್ಟಿ ಮೇನಾಲ ಸ್ವಾಗತಿಸಿ, ವಂದಿಸಿದರು.ಬಾಲಕೃಷ್ಣ ಮೇನಾಲ ಕಾರ್ಯಕ್ರಮ ನಿರೂಪಿಸಿದರು.ರೂಪ ನವೀನ್ ರೈ, ನಯನ್ ಕುಮಾರ್ ರೈ, ನವೀನ್ ರೈ ಮೇನಾಲ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಪ್ರಮುಖರಾದ

ಪದ್ಮನಾಭ ಸ್ವಾಮೀಜಿ ಮೇನಾಲ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಗುಡ್ಡಪ್ಪ ರೈ ಮೇನಾಲ, ಕಿಟ್ಟಣ್ಣ ರೈ ಇರಂತಮಜಲು, ರವೀಂದ್ರನಾಥ ರೈ, ವಿಕ್ರಂ ಅಡ್ಪಂಗಾಯ, ಪ್ರಸಾದ್ ರೈ ಮೇನಾಲ, ಸುರೇಶ್ ಕಣೆಮರಡ್ಕ, ಎ.ವಿ.ತೀರ್ಥರಾಮ, ಮುಳಿಯ ಕೇಶವ ಭಟ್, ರಾಕೇಶ್ ರೈ ಕೆಡೆಂಜಿ, ಕೇಶವ ಅಡ್ತಲೆ, ಜಯರಾಜ್ ಕುಕ್ಕೇಟ್ಟಿ, ಸುನಿಲ್ ರೈ ಕೇರ್ಪಳ, ಭಾರತಿ ಉಳುವಾರು, ವಿನುತ ಪಾತಿಕಲ್ಲು, ಬಾಲಚಂದ್ರ ದೇವರಗುಂಡ, ಶಿವಪ್ರಸಾದ್ ಉಗ್ರಾಣಿಮನೆ, ರಂಜಿತ್ ರೈ ಮೇನಾಲ, ಪುಷ್ಪಾ ಮೇದಪ್ಪ, ನಾರಾಯಣ ಕೇಕಡ್ಕ, ವಿನಯಕುಮಾರ್ ಕಂದಡ್ಕ, ಚನಿಯ ಕಲ್ತಡ್ಕ, ಶಿಲ್ಪಾ ಸುದೇವ್, ಶಶ್ಮಿ ಭಟ್, ಸಂತೋಷ್ ಕುತ್ತಮೊಟ್ಟೆ, ಅಶೋಕ್ ಅಡ್ಕಾರ್, ಸೌಖತ್ ಆಲಿ, ಆನಂದ ರಾವ್ ಕಾಂತಮಂಗಲ, ಸತ್ಯವತಿ ಬಸವನಪಾದೆ, ಶ್ರಿಕಾಂತ್ ಮಾವಿನಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.













