ಸುಳ್ಯ:ಸುಳ್ಯ-ಕಲ್ಲಪಳ್ಳಿ- ಪಾಣತ್ತೂರು ಅಂತಾರಾಜ್ಯ ಮಾರ್ಗದಲ್ಲಿ ಮತ್ತೊಂದು ಕೇರಳ ಸಾರಿಗೆ ಸಂಸ್ಥೆಯ ಬಸ್ ಸರ್ವೀಸ್ ಆರಂಭಗೊಂಡಿದೆ. ಇದೀಗ ಸುಳ್ಯ-ಕಲ್ಲಪಳ್ಳಿ- ಪಾಣತ್ತೂರು ರಸ್ತೆಯಲ್ಲಿ ಕೆಎಸ್ಆರ್ಟಿಸಿ ಹಾಗೂ ಖಾಸಗೀ ಬಸ್ಗಳ ಸೇವೆ ಇದೆ. ಸುಳ್ಯ-ಕಲ್ಲಪಳ್ಳಿ-ಪಾಣತ್ತೂರು-ಕಾಞಂಗಾಡ್ ಮಾರ್ಗದಲ್ಲಿ
ಕೆಎಸ್ಆರ್ಟಿಸಿ 3 ಬಸ್ ಓಡಾಟ ನಡೆಸುತ್ತಿದೆ. ಸುಳ್ಯ-ಕಲ್ಲಪಳ್ಳಿ-ಪಾಣತ್ತೂರು- ಕರಿಕೆ ಮಾರ್ಗದಲ್ಲಿ ಖಾಸಗೀ ಬಸ್ ರೈ ನೇತೃತ್ವದ ನಲ್ಲಿ ಟ್ರಾವೆಲ್ಸ್ ಓಡಾಟ ನಡೆಸುತಿದೆ.
ಕೆಎಸ್ಆರ್ಟಿಸಿ ಬಸ್ ಸುಳ್ಯದಿಂದ ಪಾಣತ್ತೂರು ಭಾಗಕ್ಕೆ ಬೆಳಿಗ್ಗೆ 8.45, ಪೂ.11.35, ಸಂಜೆ 4.35ಕ್ಕೆ ಹೊರಡಲಿದೆ. ಪಾಣತ್ತೂರಿನಿಂದ ಸುಳ್ಯಕ್ಕೆ ಬೆಳಿಗ್ಗೆ 7.20ಕ್ಕೆ, ಪೂರ್ವಾಹ್ನ 10.05, ಅಪರಾಹ್ನ 3.30ಕ್ಕೆ ಹೊರಡುತ್ತದೆ.
ಖಾಸಗೀ ಬಸ್ ರೈ ಟ್ರಾವೆಲ್ಸ್ ಸುಳ್ಯದಿಂದ ಬೆಳಿಗ್ಗೆ 9.05, ಮಧ್ಯಾಹ್ಬ 1.05 ಮತ್ತು ಸಂಜೆ 5.05ಕ್ಕೆ ಹೊರಡಲಿದೆ. ಪಾಣತ್ತೂರಿನಿಂದ ಬೆಳಿಗ್ಗೆ 7.30, ಪೂರ್ವಾಹ್ನ 11.30, ಅಪರಾಹ್ನ 3.30ಕ್ಕೆ ಹೊರಡುತ್ತದೆ.
ವೇಳಾ ಪಟ್ಟಿ ಇಲ್ಲಿದೆ.