ಸುಳ್ಯ:ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವ ಕಾರ್ಮಿಕರಿಗೆ ನಿವೃತ್ತಿ ನಂತರವೂ ವಸತಿ ವ್ಯವಸ್ಥೆ ಕಲ್ಪಿಸುವಂತೆ ಅರಣ್ಯ ಸಚಿವರಿಗೆ ಟಿವಿಕೆ ಅಭಿಮಾನಿ ಸಂಘ ಮನವಿ ಮಾಡಿದೆ.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ಸುಳ್ಯ ರಬ್ಬರ್ ವಿಭಾಗದಲ್ಲಿ
ಖಾಯಂ ಮೂರ್ತೆದಾರರಾಗಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಕಾರ್ಮಿಕರನ್ನು ಕೆ.ಎಫ್.ಡಿ.ಸಿ. ಕಾಲೋನಿಯಿಂದ ಖಾಲಿ ಮಾಡುವಂತೆ ಕೆ.ಎಫ್.ಡಿ.ಸಿ. ರಬ್ಬರ್ ವಿಭಾಗ ಸೂಚಿಸಿರುತ್ತದೆ. ಈ ನಿರ್ಧಾರವು ಎಲ್ಲಾ ಕಾರ್ಮಿಕರಿಗೆ ದಿಕ್ಕು ತೋಚದಂತಾಗಿದೆ. ಆದ್ದರಿಂದ ಎಲ್ಲಾ ಕಾರ್ಮಿಕರಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸುವಂತೆ ಕೆಎಫ್ಡಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ. ನಾಗಪಟ್ಟಣ ಟಿವಿಕೆ ಅಭಿಮಾನಿ ಸಂಘದ ಅರ್ಜುನ್, ಸುದರ್ಶನ ಅವರು ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದರು.














