ಸುಳ್ಯ: ಧನಂಜಯ ಅಡ್ಪಂಗಾಯ ಅವರ ಮಾಲಕತ್ವದ ಓಡಬಾಯಿಯ ಲಕ್ಷ್ಮೀನಾರಾಯಣ ಎಂಟರ್ಪ್ರೈಸಸ್ ಪೆಟ್ರೋಲ್ ಪಂಪ್ನಲ್ಲಿ ಇಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಆರಂಭಗೊಂಡಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ನ
ಮಂಗಳೂರು ಡಿವಿಷನಲ್ ರಿಟೇಲ್ ಸೇಲ್ಸ್ ಹೆಡ್ ಯೋಗೇಶ್ ಪಾಟಿದಾರ್, ವ್ಯವಸ್ಥಾಪಕರಾದ ಅನೀಶ್ ಕುಮಾರ್, ಅಜಿಂಕ್ಯಾ ಜಾಧವ್, ಇಂಜಿನಿಯರಿಂಗ್ ಆಫೀಸರ್ ರೇಖಾ ಶರ್ಮ, ಸಂಸ್ಥೆಯ ಮಾಲಕರಾದ ಧನಂಜಯ ಅಡ್ಪಂಗಾಯ, ರಾಜೇಶ್ ಪೆಟ್ರೋಲ್ ಪಂಪ್ನ ಮಾಲಕ ಗಣೇಶ್ ಆಳ್ವ, ಲಕ್ಷ್ಮೀನಾರಾಯಣ ಎಂಟರ್ಪ್ರೈಸಸ್ನ ವ್ಯವಸ್ಥಾಪಕ ವಿಖಿತ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಅಖಿಲೇಶ್ ಪಾಲಾರ್ ಪ್ರಥಮ ಗ್ರಾಹಕರಾಗಿದ್ದರು.
ಒಂದು ಗಂಟೆಯಲ್ಲಿ 60 ಯೂನಿಟ್ ಚಾರ್ಜ್ ಮಾಡಬಹುದು. 60 ಯೂನಿಟ್ ಚಾರ್ಜ್ ಮಾಡಿದಲ್ಲಿ 300 ಕಿ.ಮಿ. ವಾಹನ ಚಲಾವಣೆ ಮಾಡಬಹುದು. ಒಂದು ಯೂನಿಟ್ಗೆ 15 ರೂ ಚಾರ್ಜ್ ಆಗಲಿದೆ, 300 ಕಿ.ಮಿ.ಗೆ 900 ರೂ ಆಗಲಿದ್ದು ಕಿ.ಮಿ.ಗೆ 3ರೂ ಅಸ್ಟೇ ತಗಲಲಿದೆ ಎಂದು ಮಾಲಕರಾದ ಧನಂಜಯ ಅಡ್ಪಂಗಾಯ ತಿಳಿಸಿದ್ದಾರೆ.














