ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಅಮೋಘ ಶತಕ ಬಾರಿಸಿದ್ದಾರೆ. ಇದರೊಂದಿಗೆ ಭಾರತ ತಂಡವು ಉತ್ತಮ ಮೊತ್ತ ಗಳಿಸುವತ್ತ ಹೆಜ್ಜೆ ಇಟ್ಟಿದೆ. ಲೀಡ್ಸ್ನ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 6 ರನ್ಗಳ ಅಲ್ಪ ಮುನ್ನಡೆ ಸಾಧಿಸಿದ್ದ ಭಾರತ ಸದ್ಯ
8 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿದೆ. 355 ರನ್ಗಳ ಮುನ್ನಡೆ ಗಳಿಸಿಕೊಂಡಿದೆ.ಮೂರನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ಗೆ 90 ರನ್ ಗಳಿಸಿದ್ದ ಟೀಂ ಇಂಡಿಯಾ, ಇಂದು ಆ ಮೊತ್ತಕ್ಕೆ ಕೇವಲ 2 ರನ್ ಸೇರಿಸುವಷ್ಟರಲ್ಲಿ ನಾಯಕ ಶುಭಮನ್ ಗಿಲ್ (8 ರನ್) ವಿಕೆಟ್ ಕಳೆದುಕೊಂಡಿತು. ನಂತರ ರಾಹುಲ್ ಮತ್ತು ಪಂತ್ ಆಟ ರಂಗೇರಿತು.ಈ ಜೋಡಿ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 195 ರನ್ ಗಳಿಸಿ ಬ್ಯಾಟಿಂಗ್ ಗಳಿಸಿದರು. 247 ಎಸೆತಗಳನ್ನು ಎದುರಿಸಿರುವ ರಾಹುಲ್ 18 ಬೌಂಡರಿ ಸಹಿತ 1137 ರನ್ ಗಳಿಸಿದರೆ, ಪಂತ್ 140 ಎಸೆತಗಳಲ್ಲೇ 15 ಬೌಂಡರಿ ಹಾಗೂ 3 ಸಿಕ್ಸ್ ಸಹಿತ 118 ರನ್ ಗಳಿಸಿದ್ದಾರೆ.
ಒಟ್ಟಾರೆ 59 ಪಂದ್ಯ ಆಡಿರುವ ರಾಹುಲ್ಗೆ ಇದು 9ನೇ ಶತಕವಾದರೆ, 44 ಟೆಸ್ಟ್ಗಳಲ್ಲಿ ಕಣಕ್ಕಿಳಿದಿರುವ ಪಂತ್ಗೆ 8ನೇಯದ್ದು. ಎರಡೂ ಇನ್ನೀಂಗ್ಸ್ನಲ್ಲಿ ಶತಕ ಭಾರಿಸಿದ ದಾಖಲೆಯನ್ನು ಪಂತ್ ಬರೆದರು.
ಇದು, ಇಂಗ್ಲೆಂಡ್ನಲ್ಲಿ ರಾಹುಲ್ ಗಳಿಸಿದ ಮೂರನೇ ಶತಕವಾಗಿದೆ. ಇದರೊಂದಿಗೆ ಅವರು, ಆಂಗ್ಲರ ನಾಡಿನಲ್ಲಿ ಅತಿಹೆಚ್ಚು ಸಲ ಮೂರಂಕಿ ದಾಟಿದ ಏಷ್ಯಾದ ಆರಂಭಿಕ ಬ್ಯಾಟರ್ ಎಂಬ ದಾಖಲೆಯನ್ನು ಮಾಡಿದ್ದಾರೆ.
ದಿಗ್ಗಜ ರಾಹುಲ್ ದ್ರಾವಿಡ್, ವಿಜಯ್ ಮರ್ಚಂಟ್, ರವಿಶಾಸ್ತ್ರಿ ಹಾಗೂ ಬಾಂಗ್ಲಾದೇಶದ ತಮಿಮ್ ಇಕ್ಬಾಲ್ ತಲಾ ಎರಡು ಶತಕ ಸಿಡಿಸಿದ್ದಾರೆ. ಇದಲ್ಲದೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ದೇಶಗಳಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಭಾರತೀಯ ಆರಂಭಿಕ ಬ್ಯಾಟರ್ಗಳ ಪಟ್ಟಿಯಲ್ಲಿ ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಈ ದೇಶಗಳಲ್ಲಿ ಒಟ್ಟು ಐದು ಶತಕ ಸಿಡಿಸಿದ್ದಾರೆ. ಸುನಿಲ್ ಗವಾಸ್ಕರ್ 8 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಎರಡೂ ಇನಿಂಗ್ಸ್ಗಳಲ್ಲಿ ಪಂತ್ ಶತಕ ಬಾರಿಸಿದರು.ಮೊದಲ ಇನಿಂಗ್ಸ್ನಲ್ಲೂ ಶತಕ (134 ರನ್) ಬಾರಿಸಿದ್ದ ರಿಷಭ್, ಎರಡನೇ ಇನಿಂಗ್ಸ್ನಲ್ಲೂ ಅದೇ ಸಾಧನೆ ಪುನರಾವರ್ತಿಸುವ ಮೂಲಕ ದಿಗ್ಗಜರ ಸಾಲಿಗೆ ಸೇರಿದರು.ಈ ಸಾಧನೆ ಮಾಡಿದ ವಿಶ್ವದ ಎರಡನೇ ವಿಕೆಟ್ ಕೀಪರ್ ರಿಷಭ್ ಪಂತ್. ಜಿಂಬಾಬ್ವೆಯ ಆ್ಯಂಡಿ ಫ್ಲವರ್ ಅವರು 2001ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅವಳಿ ಶತಕ (142 ಹಾಗೂ ಅಜೇಯ 199 ರನ್) ಬಾರಿಸಿದ್ದರು.ಭಾರತದ ಪರ ವಿಜಯ್ ಹಜಾರೆ, ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮಾ ಒಂದೇ ಪಂದ್ಯದ ಎರಡು ಇನಿಂಗ್ಸ್ಗಳಲ್ಲಿ ಶತಕ ಬಾರಿಸಿದ್ದರು. ಈ ಪೈಕಿ ಸುನಿಲ್ ಮೂರು ಬಾರಿ ಹಾಗೂ ದ್ರಾವಿಡ್ ಎರಡು ಸಲ ಈ ಸಾಧನೆ ಮಾಡಿದ್ದರು.10 ರನ್ ಗಳಿಸಿದ ರವೀಂದ್ರ ಜಡೇಜ ಹಾಗೂ 0 ರನ್ ಗಳಿಸಿದ ಜಸ್ಪ್ರೀತ್ ಬೂಮ್ರಾ ಕ್ರೀಸಿನಲ್ಲಿದ್ದಾರೆ.
4 ರನ್ ಗಳಿಸಿ ಶಾರ್ದೂಲ್ ಠಾಕೂರ್,ಕರುಣ್ ನಾಯರ್ 20 ರನ್ ಬಾರಿಸಿ ಔಟ್ ಆದರು.