ಚೆನ್ನೈ:ಐಪಿಎಲ್ನಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ಗೆ 159 ರನ್ಗಳ ಸಾಧಾರಣ ಮೊತ್ತ ಗಳಿಸಿತು. ಗುರಿ ಬೆಮ್ನಟ್ಟಿದ ಚೆನ್ನೈ 18.1 ಓವರ್ಗಳಲ್ಲಿ
2 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವಿನ ನಗೆ ಬೀರಿದರು. ಚೆನ್ನೈ ಪರ ಋತುರಾಜ್ ಗಾಯಕ್ವಾಡ್ ಮತ್ತು ಕಾರ್ತಿಕ್ ಶರ್ಮ ಅರ್ಧ ಶತಕ ಬಾರಿಸಿದರು. ಗಾಯಕ್ವಾಡ್ 48 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 67ರನ್ ಗಳಿಸಿದರೆ, ಕಾರ್ತಿಕ್ ಶರ್ಮ 40 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 54 ರನ್ ಗಳಿಸಿದರು. ಉರುವಿಲ್ ಪಟೇಲ್ 12 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 24 ರನ್ ಗಳಿಸಿದರು. ಸಂಜು ಸ್ಯಾಮ್ಸನ್ 11 ರನ್ ಗಳಿಸಿ ಔಟ್ ಆದರು.
ಮುಂಬೈ ಪರ ಆರಂಭಿಕ ರಿಯಾನ್ ರಿಕೆಲ್ಟನ್ (37), ನಮನ್ ಧೀರ್ (57), ಅನುಭವಿ ಸೂರ್ಯಕುಮಾರ್ ಯಾದವ್ (21) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (18) ಹೊರತುಪಡಿಸಿದರೆ ಉಳಿದವರು ಎರಡಂಕಿಯನ್ನೇ ಮುಟ್ಟಲಿಲ್ಲ.ಚೆನ್ನೈ ಪರ ಅನ್ಶುಲ್ ಕಾಂಬೋಜ್ ಮೂರು ವಿಕೆಟ್ ಪಡೆದರೆ, ನೂರ್ ಅಹ್ಮದ್ ಎರಡು ವಿಕೆಟ್ ಕಿತ್ತರು. ಇನ್ನೆರಡು ವಿಕೆಟ್ಗಳನ್ನು ರಾಮಕೃಷ್ಣ ಘೋಷ್ ಮತ್ತು ಜೆಮೀ ಓವರ್ಟನ್ ಪಡೆದುಕೊಂಡರು. ಮುಂಬೈ ಆಡಿರುವ 9 ಪಂದ್ಯಗಳಲ್ಲಿ ಎರಡರಲ್ಲಷ್ಟೇ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಚೆನ್ನೈ ಪಡೆಯೂ ಇಷ್ಟೇ ಪಂದ್ಯಗಳನ್ನು ಆಡಿ 4ರಲ್ಲಿ ಜಯ ಸಾಧಿಸಿ ಆರನೇ ಸ್ಥಾನದಲ್ಲಿದೆ.












