ಕಲ್ಲುಗುಂಡಿ: ಧರ್ಮೋತ್ಥಾನ ಪರಿಷತ್ ವತಿಯಿಂದ ಕಲ್ಲುಗುಂಡಿಯಲ್ಲಿ ‘ಬೃಹತ್ ಹಿಂದೂ ಸಮಾಜೋತ್ಸವ’ ನಡೆಸುವ ಕುರಿತು ಸಮಾಲೋಚನಾ ಸಭೆ ಕಲ್ಲುಗುಂಡಿ ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ನಡೆಯಿತು.
ದ.ಕ.ಸಂಪಾಜೆ, ಕೊಡಗು ಸಂಪಾಜೆ, ಚೆಂಬು ಗ್ರಾಮಗಳ ಮುಖಂಡರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು. ಮುಂದಿನ
ಏಪ್ರಿಲ್ ತಿಂಗಳಲ್ಲಿ ಹಿಂದೂ ಸಮಾಜೋತ್ಸವ ನಡೆಸುವ ಕುರಿತು ಚರ್ಚಿಸಲಾಯಿತು.ಪ್ರಮುಖರು ವಿಚಾರ ಮಂಡನೆ ಮಾಡಿ ಚರ್ಚೆ, ಸಮಾಲೋಚನೆ ನಡೆಸಿದರು.ರಮಾದೇವಿ ಕಳಗಿ, ರಾಜಗೋಪಾಲ ಉಳುವಾರು, ಮಾಧವ ಪೇರಾಲು , ಶ್ರೀಧರ ದುಗ್ಗಳ, ಧನಪಾಲ ಗೂನಡ್ಕ ಮುಂತಾದವರು ಕಾರ್ಯ ಯೋಜನೆ ಕುರಿತು ಮಾತನಾಡಿದರು.
ಯಶೋಧರ ಬಿ.ಜೆ ., ಮೋಹನ್ ಚೈಪೆ, ಸುಧಾಕರ ಪೆಲ್ತಡ್ಕ, ಶಿವಪ್ರಸಾದ್ ಗೂನಡ್ಕ, ಹೇಮನಾಥ ಕಡೆಪಾಲ,ನಾಗೇಶ್ ಪೇರಾಲು, ಕೃಷ್ಣಪ್ರಸಾದ್ ಕೊಚ್ಚಿ, ರಮೇಶ್ ಹುಲ್ಲುಬೆಂಕಿ, ಲೋಕನಾಥ್ ಎಸ್.ಪಿ , ಚಂದ್ರಶೇಖರ ಬಾಚಿಗದ್ದೆ , ವರದರಾಜ ಸಂಕೇಶ ಸೇರಿದಂತೆ ಪ್ರಮುಖರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.