ಸುಳ್ಯ: ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವೈಭವದ ಜಾತ್ರೋತ್ಸವ ನಡೆಯುತಿದೆ. ಇಂದು ಬೆಳಿಗ್ಗೆ ಶ್ರೀ ದೇವರ ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಲಿದೆ ರಾತ್ರಿ ಕಲ್ಕುಡ ದೈವಗಳ ಭಂಡಾರ ಬಂದ ಬಳಿಕ
ಬ್ರಹ್ಮ ರಥೋತ್ಸವ ನಡೆಯಲಿದೆ. ನೂತನ ಬ್ರಹ್ಮ ರಥದಲ್ಲಿ ರಥೋತ್ಸವ ನಡೆಯುವುದು ಈ ಬಾರಿಯ ವಿಶೇಷತೆ. ರಥಬೀದಿಯಲ್ಲಿ ನಡೆಯುವ ವೈಭವದ ಬ್ರಹ್ಮ ರಥೋತ್ಸವವನ್ನು ಸಾವಿರಾರು ಮಂದಿ ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ. ಜ.9ರಂದು ರಾತ್ರಿ ಮಿತ್ತೂರು ದೈವಗಳ ಭಂಡಾರ ಬಂದ ಬಳಿಕ ಕಾನತ್ತಿಲ ದೈವಗಳ ಭಂಡಾರ ಆಗಮಿಸಿ ವಾಲಸಿರಿ ಉತ್ಸವ ನಡೆಯಿತು.