ಸುಳ್ಯ:ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸುಳ್ಯ ನಗರದಲ್ಲಿ ವಿವಿಧೆಡೆ ನೀರು ನುಗ್ಗಿದೆ. ಪಯಸ್ವಿನಿ, ಕುಮಾರಧಾರಾ ನದಿಗಳು, ಕಂದಡ್ಕ ಹೊಳೆ ತುಂಬಿ ಹರಿಯುತಿದೆ. ನದಿ ಪಾತ್ರದ ಕೆಲವೆಡೆ
ತೋಟಗಳಿಗೆ, ರಸ್ತೆಗಳಿಗೆ ನೀರು ನುಗ್ಗಿದೆ.
ಭಾರೀ ಮಳೆಗೆ ಸುಳ್ಯದ ರಸ್ತೆಗಳು ತುಂಬಿ ಹರಿದಿದೆ. ಹಲವು ಕಡೆ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ.ನಗರದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೆಸರು ಮಿಶ್ರಿತ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಸುಳ್ಯದ ಕೊಯಿಂಗೋಡಿ ಕಾಂಪ್ಲೆಕ್ಸ್ ಎದುರಿನ ರಸ್ತೆಯಲ್ಲಿ

ನೀರು ನಿಂತು ಸಂಚಾರಕ್ಕೆ ಅಡಚರಣೆಯಾಗಿದೆ. ಅಂಗಡಿಗಳ ಮುಂದೆ, ಬದಿಗೆ ನೀರು ನುಗ್ಗಿದೆ. ಸರಕಾರಿ ಆಸ್ಪತ್ರೆಯ ಬಳಿ, ಕುರುಂಜಿಭಾಗ್ , ಬೊಳುಬೈಲು ಸೇರಿದಂತೆ ಹಲವು ಕಡೆಯಲ್ಲಿ ರಸ್ತೆಯ ಮೇಲೆಯೇ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿದೆ. ಹಳೆಗೇಟಿನಲ್ಲಿ ಮಳೆ ನೀರು ನಿಂತು ಹೊಳೆಯಂತಾಗಿತ್ತು. ಬೊಳುಬೈಲಿನಲ್ಲಿ ಮಳೆ ನೀರು ರಾಜ್ಯ ಹೆದ್ದಾರಿಗೆ ನುಗ್ಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.












