ಸುಬ್ರಹ್ಮಣ್ಯ:ಕುಕ್ಕೆ ಸುಬ್ರಹ್ಮಣ್ಯ, ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಕುಮಾರಧಾರ ನದಿಯ ಸ್ನಾನ ಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇಂದು ನೀರಿನ ಹರಿವಿನ ಪ್ರಮಾಣ ಮತ್ತೆ ಹೆಚ್ಚಿದೆ.ಸ್ನಾನ ಘಟ್ಟದ ಬಳಿಯಿದ್ದ ದೇವರ ಕಟ್ಟೆ, ಡ್ರೆಸ್ಸಿಂಗ್ ಕೊಠಡಿ, ಶೌಚಾಲಯ ನೀರಿನಲ್ಲಿ ಮುಳುಗಿವೆ. ಭದ್ರತಾ ಕೊಠಡಿ ಮೆಟ್ಟಿಲ ಬಳಿ ವರೆಗೆ ನೀರು ಬಂದಿದೆ. ದೇವಾಲಯದ ಭದ್ರತಾ ಸಿಬ್ಬಂದಿಗಳು ಮುನ್ನೆಚ್ಚರಿಕೆ ವಹಿಸಿದ್ದು ಭಕ್ತರು ನೀರಿಗಿಳಿಯದಂತೆ ಸೂಚನೆ ನೀಡಿದ್ದಾರೆ.












