ಕಲ್ಲಪಳ್ಳಿ: ಕೇರಳ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಕೇರಳದ ಕೊಲ್ಲಂನಲ್ಲಿ ನಡೆದ ರಾಜ್ಯಮಟ್ಟದ ಸೀನಿಯರ್ ಸ್ಟೇಟ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಹ್ಯಾಮರ್ ಥ್ರೋ ವಿಭಾಗದಲ್ಲಿ ಕಲ್ಲಪಳ್ಳಿಯ ಅನುಷಾ ಭಾಸ್ಕರ್ ತೃತೀಯ ಸ್ಥಾನ ಪಡೆದಿದ್ದಾರೆ. ಕಲ್ಲಪಳ್ಳಿಯ
ಬಾಟೋಳಿ ನಿವಾಸಿ ಶ್ರೀಮತಿ ಪುಷ್ಪ ಮತ್ತು ದಿ.ಭಾಸ್ಕರ ಬಾಟೋಳಿ ದಂಪತಿಯ ಪುತ್ರಿಯಾಗಿರುವ ಅನುಷಾ ಉಜಿರೆಯ ಎಸ್.ಡಿ.ಎಂ. ಕಾಲೇಜಲ್ಲಿ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ. ಪ್ರೌಢಶಾಲೆ ಹಾಗು ಕಾಲೇಜು ವಿಭಾಗದಲ್ಲಿ ಜಿಲ್ಲೆ ಹಾಗು ರಾಜ್ಯಮಟ್ಟದಲ್ಲಿ ಹಲವು ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಭಾಗವಹಿಸಿದ ಅನುಷಾ ಪದಕ ಪಡೆದಿದ್ದರು.













