ಸುಳ್ಯ:ಅಂತಾರಾಜ್ಯ ಸಂಪರ್ಕ ರಸ್ತೆಯಾದ ಆಲೆಟ್ಟಿ-ಬಡ್ಡಡ್ಕ- ಕೂರ್ನಡ್ಕ ರಸ್ತೆ ಅಭಿವೃದ್ಧಿಗೆ ಕರ್ನಾಟಕ ಸರಕಾರ 7 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ.ಅಂತಾರಾಜ್ಯ ರಸ್ತೆಯಲ್ಲಿ ಕರ್ನಾಟಕದ ಭಾಗ ಆಲೆಟ್ಟಿ ಗ್ರಾಮದ ನಾರ್ಕೋಡಿನಿಂದ ಬಡ್ಡಡ್ಕ, ಕೂರ್ನಡ್ಕದ ತನಕ ತನಕದ ರಸ್ತೆಯ
ಪರಿಸ್ಥಿತಿ ಶೋಚನೀಯವಾಗಿದ್ದು ಸಂಚಾರ ದುಸ್ತರವಾಗಿದೆ. ಈ ರಸ್ತೆ ಅಭಿವೃದ್ಧಿ ಮಾಡಬೇಕು ಎಂಬುದು ಹಲವು ದಶಕಕಗಳ ಬೇಡಿಕೆಯಾಗಿತ್ತು. ಸುಳ್ಯ ಪಾಣತ್ತೂರು- ಅಂತಾರಾಜ್ಯ ರಸ್ತೆ 20 ಕಿ.ಮಿ.ಇದೆ. ಇದರಲ್ಲಿ ಕೇರಳ ಭಾಗ 10 ಕಿ.ಮಿ.ನಲ್ಲಿ ಉತ್ತಮ ರಸ್ತೆಯಾಗಿ ಅಭಿವೃದ್ಧಿ ಆಗಿದೆ. ಕರ್ನಾಟಕದ ಭಾಗ 10 ಕಿ.ಮಿ.ನಲ್ಲಿ ಬಾಟೋಳಿ ಗಡಿಯಿಂದ ಬಡ್ಡಡ್ಕ ತನಕ ಒಂದೂವರೆ ಕಿ.ಮಿ.ರಸ್ತೆ ಅಭಿವೃದ್ಧಿ ಕಂಡಿದೆ. ಸುಳ್ಯದಿಂದ ನಾರ್ಕೋಡು ತನಕ ರಸ್ತೆ ಅಭಿವೃದ್ಧಿಯಾಗಿದೆ.
ನಾರ್ಕೋಡಿನಿಂದ ಬಡ್ಡಡ್ಕ, ಕೂರ್ನಡ್ಕ ತನಕ ಸುಮಾರು ಕಿ.ಮಿ. ರಸ್ತೆಯ ಸ್ಥಿತಿ ಮಾತ್ರ ಹೇಳತೀರದು.ಸುಳ್ಯ-ಆಲೆಟ್ಟಿ- ಬಡ್ಡಡ್ಕ ಕೂರ್ನಡ್ಕ ರಸ್ತೆ ಲೋಕೋಪಯೋಗಿ ರಸ್ತೆಯಾಗಿ ಮೇಲ್ದರ್ಜೆಗೇರಿದೆ. 11 ಕಿ.ಮಿ.ರಸ್ತೆಯಲ್ಲಿ ಸುಳ್ಯದಿಂದ ನಾರ್ಕೋಡು ತನಕ ಮಾತ್ರ ಅಭಿವೃದ್ಧಿಯಾಗಿದೆ. ನಾರ್ಕೋಡಿನಿಂದ ಬಡ್ಡಡ್ಕ ತನಕ ಹಾಗೂ ಬಡ್ಡಡ್ಕದಿಂದ ಕೂರ್ನಡ್ಕ ತನಕ ರಸ್ತೆ ಅಭಿವೃದ್ಧಿ ಕಂಡಿಲ್ಲ.
ಅಗಲ ಕಿರಿದಾದ ರಸ್ತೆಯಲ್ಲಿ ಸಂಪೂರ್ಣ ಹೊಂಡ ಗುಂಡಿಗಳೇ ತುಂಬಿದೆ.













