ಮಂಡೆಕೋಲು:ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ನಡೆಯಲಿರುವ 73ನೇ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಪ್ರಯುಕ್ತ ಮ್ಯಾರಥಾನ್, ಸಹಕಾರಿ ಕ್ರೀಡಾಕೂಟ ಏರ್ಪಡಿಸಲಾಗಿದೆ. ಅ.25ರಂದು . ಆರೋಗ್ಯಕರ ಜೀವನಕ್ಕೆ ಮ್ಯಾರಥಾನ್ ಒಂದು ಹೆಜ್ಜೆ
ಎಂಬ
ಧ್ಯೇಯದೊಂದಿಗೆ ಮಂಡೆಕೋಲು ಗ್ರಾಮ ಮಟ್ಟದಲ್ಲಿ ಮ್ಯಾರಥಾನ್ ಸ್ಪರ್ಧೆ ಏರ್ಪಡಿಸಲಾಗಿದೆ. ಅ.25ರಂದು ಬೆಳಿಗ್ಗೆ 7 ಗಂಟೆಗೆ ಮಂಡೆಕೋಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಮ್ಯಾರಥಾನ್ ಆರಂಭವಾಗಲಿದೆ. ಅಲ್ಲದೆ
ಸಹಕಾರ ಸಪ್ತಾಹದ ಪ್ರಯುಕ್ತ ಮಂಡೆಕೋಲು ಗ್ರಾಮ ಮಟ್ಟದ ಕ್ರೀಡಾಕೂಟ ಅ.26ರಂದು ಮಂಡೆಕೋಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.ವಾಲಿಬಾಲ್(ಪುರುಷರಿಗೆ) ಮತ್ತು ಪ್ರೋಬಾಲ್ (ಮಹಿಳೆಯರಿಗೆ) ಹಾಗೂ ಹಗ್ಗಜಗ್ಗಾಟ (ಪುರುಷರು & ಮಹಿಳೆಯರಿಗೆ) ಸ್ಪರ್ಧೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ಗುಂಡೆಸೆತ ಸ್ಪರ್ಧೆ,ಹಿರಿಯರಿಗೆ ವೇಗದ ನಡಿಗೆ, ಲಕ್ಕಿಗೇಮ್ ಸ್ಪರ್ಧೆ ನಡೆಯಲಿದೆ. ಅಲ್ಲದೆ
ಸುಳ್ಯ ತಾಲೂಕು ಮಟ್ಟದ ಸಹಕಾರಿ ಕ್ರೀಡಾಕೂಟ ನ.1ರಂದು ಪೇರಾಲು ಸ.ಹಿ.ಪ್ರಾ. ಶಾಲೆಯಲ್ಲಿ ನಡೆಯಲಿದೆ. ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗು ಸಿಬ್ಬಂದಿಗಳಿಗೆ 30 ಗಜಗಳ ಕ್ರಿಕೆಟ್ ಪಂದ್ಯಾಟ, ಹಗ್ಗಜಗ್ಗಾಟ ಪುರುಷರಿಗೆ & ಮಹಿಳೆಯರಿಗೆ, ಗುಂಡೆಸೆತ ಪುರುಷರಿಗೆ & ಮಹಿಳೆಯರಿಗೆ ಲಕ್ಕಿ ಗೇಮ್,ನವೋದಯ ಸ್ವ ಸಹಾಯ ಸಂಘಗಳ ಸದಸ್ಯರಿಗೆಹಗ್ಗಜಗ್ಗಾಟ (ಪುರುಷರಿಗೆ & ಮಹಿಳೆಯರಿಗೆ),ಗುಂಡೆಸೆತ (ಪುರುಷರಿಗೆ & ಮಹಿಳೆಯರಿಗೆ) ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.








